ADVERTISEMENT

ಆರೋಗ್ಯ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನವನ್ನು ಬಳಸಿ: ನರೇಂದ್ರ ಮೋದಿ

ಪಿಟಿಐ
Published 1 ಜೂನ್ 2020, 8:50 IST
Last Updated 1 ಜೂನ್ 2020, 8:50 IST
ವಿಡಿಯೊ ಸಂವಾದದಲ್ಲಿ ಮೋದಿ (ಪ್ರಜಾವಾಣಿ ಚಿತ್ರ)
ವಿಡಿಯೊ ಸಂವಾದದಲ್ಲಿ ಮೋದಿ (ಪ್ರಜಾವಾಣಿ ಚಿತ್ರ)   

ನವದೆಹಲಿ: ಆರೋಗ್ಯಕರವಾದ ಸಮಾಜಕ್ಕಾಗಿ ಆರೋಗ್ಯ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ಉತ್ಪನ್ನಗಳನ್ನು ಮತ್ತು ಮಾಹಿತಿ ತಂತ್ರಜ್ಞಾನದ ಪರಿಕರಗಳನ್ನುಬಳಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ, ಟೆಲಿ ಮೆಡಿಸಿನ್‌ ಅನ್ನು ಮತ್ತಷ್ಟು ಪ್ರಚಾರ ಮಾಡುವುದಕ್ಕೆ ಹೊಸತಾಗಿ ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚಿಸಿದ್ದಾರೆ.

ಮೇಕ್ ಇನ್ ಇಂಡಿಯಾ ಬಗ್ಗೆ ಪ್ರಸ್ತಾಪಿಸಿದ ಅವರು ಆರಂಭದಲ್ಲಿಯೇ ಇಲ್ಲಿ ಸಿಕ್ಕಿದ ಪ್ರಯೋಜನಗಳು ನನ್ನಲ್ಲಿ ಆಶಾವಾದವನ್ನುಂಟು ಮಾಡಿದೆ. ನಮ್ಮ ದೇಶದಲ್ಲಿಯೇ ಪಿಪಿಇ ತಯಾರಿಸಿ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಒಂದು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗಿದೆ.ಮಾಹಿತಿ ತಂತ್ರಜ್ಞಾನದ ಪರಿಕರಗಳನ್ನುಬಳಸುವುದು ಆರೋಗ್ಯವಲಯಕ್ಕೆ ಸಹಕಾರಿ ಆಗಲಿದೆ ಎಂದಿದ್ದಾರೆ.

ADVERTISEMENT

ನೀವು ಆರೋಗ್ಯ ಸೇತು ಬಗ್ಗೆ ಕೇಳಿರಬಹುದು.ಆರೋಗ್ಯದ ಬಗ್ಗೆ ಕಾಳಜಿಯುಳ್ಳ 12 ಕೋಟಿ ಜನರು ಅದನ್ನು ಡೌನ್‍ಲೋಡ್ ಮಾಡಿದ್ದಾರೆ. ಕೊರೊನಾವೈರಸ್ ವಿರುದ್ಧ ಹೋರಾಡಲು ಇದು ತುಂಬಾ ಸಹಕಾರಿ ಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.