ADVERTISEMENT

ಕೋವಿಡ್‌ ತಡೆಗೆ ಕ್ರಮ: ಧಾರ್ಮಿಕ ಕೂಟಗಳನ್ನು ನಿರ್ಬಂಧಿಸಿದ ರಾಜಸ್ಥಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜುಲೈ 2021, 5:45 IST
Last Updated 17 ಜುಲೈ 2021, 5:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೈಪುರ: ಕೋವಿಡ್‌-19 ನಿಯಂತ್ರಿಸುವ ಸಲುವಾಗಿ ಕನ್ವರ್‌ ಯಾತ್ರೆ ಮತ್ತು ಈದ್‌-ಉಲ್-ಜುಹಾ ಸೇರಿದಂತೆ ಎಲ್ಲ ರೀತಿಯ ಧಾರ್ಮಿಕ ಆಚರಣೆಗಳು ಮತ್ತು ಉತ್ಸವಗಳನ್ನು ನಿರ್ಬಂಧಿಸಲಾಗುವುದು ಎಂದುರಾಜಸ್ಥಾನ ಸರ್ಕಾರ ತಿಳಿಸಿದೆ.

ಅಧಿಸೂಚನೆ ಪ್ರಕಾರ, ಮಥುರಾದ ಗೋವರ್ಧನ ಪ್ರದೇಶದಲ್ಲಿ ಪ್ರತಿವರ್ಷ ಏರ್ಪಡಿಸುವ ಮುದಿಯಾ ಪೂನೊ ಮೇಳವೂ ಈ ವರ್ಷ ನಡೆಯುವುದಿಲ್ಲ. ಭಕ್ತರು ಗುಂಪುಗೂಡುವುದಕ್ಕೆ ಅನುಮತಿನೀಡಲಾಗುವುದಿಲ್ಲ. ಭಕ್ತರು ಮನೆಗಳಲ್ಲಿಯೇ ದೇವರಿಗೆ ಪ್ರಾರ್ಥನೆ ಸಲ್ಲಿಸುವಂತೆ ಮತ್ತು ಕೋವಿಡ್‌ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆಸರ್ಕಾರ ಮನವಿ ಮಾಡಿದೆ.

ಉತ್ತರಾಖಂಡದಲ್ಲಿ ಕನ್ವರ್‌ ಯಾತ್ರೆಯನ್ನು ಸತತ ಎರಡನೇ ವರ್ಷವೂ ನಿಷೇಧಿಸಲಾಗಿದೆ. ಆದರೆ, ಉತ್ತರ ಪ್ರದೇಶದಲ್ಲಿ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ADVERTISEMENT

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ರಾಜಸ್ಥಾನದಲ್ಲಿ ಇದುವರೆಗೆ9,43,788 ಸೋಂಕಿತರು ಗುಣಮುಖರಾಗಿದ್ದು,8,947 ಮಂದಿ ಮೃತಪಟ್ಟಿದ್ದಾರೆ.ಇನ್ನೂ522 ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ ಇದುವರೆಗೆ 2ಕೋಟಿ 75ಲಕ್ಷಕ್ಕೂ ಹೆಚ್ಚು ಡೋಸ್‌ ಲಸಿಕೆ ವಿತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.