ADVERTISEMENT

India Covid Updates: 29 ಸೋಂಕಿತರು ಸಾವು, 17,092 ಹೊಸ ಪ್ರಕರಣ

ಪಿಟಿಐ
Published 2 ಜುಲೈ 2022, 5:36 IST
Last Updated 2 ಜುಲೈ 2022, 5:36 IST
   

ನವದೆಹಲಿ: ದೇಶದಲ್ಲಿ ಕೋವಿಡ್‌–19 ದೃಢಪಟ್ಟ 17,092 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಇದುವರೆಗೆ ವರದಿಯಾದ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ4,34,86,326ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ1,09,568ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

ಸಚಿವಾಲಯ ಬೆಳಗ್ಗೆ 8ಕ್ಕೆ ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಮೃತಪಟ್ಟ 29 ಸೋಂಕಿತರೂ ಸೇರಿದಂತೆ ಇದುವರೆಗೆ5,25,168 ಮಂದಿ ಕೋವಿಡ್‌ನಿಂದಾಗಿ ಸಾವಿಗೀಡಾಗಿದ್ದಾರೆ.

24 ಗಂಟೆಗಳಲ್ಲಿ ಮೃತಪಟ್ಟವರ ಪೈಕಿ 15 ಮಂದಿ ಕೇರಳದವರು. ಉಳಿದಂತೆ ಮಹಾರಾಷ್ಟ್ರದಲ್ಲಿ ನಾಲ್ಕು, ದೆಹಲಿಯಲ್ಲಿ ಮೂರು, ಪಂಜಾಬ್‌ನಲ್ಲಿ ಎರಡು ಮತ್ತು ಚತ್ತೀಸಗಡ, ಬಿಹಾರ, ಗುಜರಾತ್‌, ಕರ್ನಾಟಕ ಹಾಗೂ ರಾಜಸ್ಥಾನದಲ್ಲಿತಲಾ ಒಂದು ಪ್ರಕರಣಗಳು ವರದಿಯಾಗಿವೆ.

ADVERTISEMENT

ಒಟ್ಟಾರೆ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ 0.25 ರಷ್ಟಿದೆ. ದೈನಂದಿನ ಸೋಂಕು ಖಚಿತ ದರ ಶೇ4.14 ಮತ್ತು ವಾರದ ಸೋಂಕು ದೃಢ ಪ್ರಮಾಣ ಶೇ3.56 ರಷ್ಟಿದೆ.ದೇಶದಲ್ಲಿ ಈವರೆಗೆ4,28,51,590 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಒಟ್ಟಾರೆ ಪ್ರಕರಣಗಳ ಪೈಕಿ ಇದರ ಪ್ರಮಾಣ ಶೇ 98.54 ಆಗುತ್ತದೆಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ದೇಶದಾದ್ಯಂತ ಇಲ್ಲಿಯವರೆಗೆ ಒಟ್ಟು 197.84 ಕೋಟಿ ಡೋಸ್‌ ಕೋವಿಡ್‌ ಲಸಿಕೆ ವಿತರಿಸಲಾಗಿದೆ ಎಂದೂ ತಿಳಿಸಲಾಗಿದೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 2020ರ ಆಗಸ್ಟ್‌ 7 ರಂದು 20 ಲಕ್ಷದ ಗಡಿ ದಾಟಿತ್ತು. ಅದೇ ವರ್ಷದ ಆಗಸ್ಟ್‌ 23ರಂದು 30 ಲಕ್ಷ, ಸೆಪ್ಟೆಂಬರ್‌ 5ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16ರಂದು 50 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ನಂತರ ಸೆಪ್ಟೆಂಬರ್‌ 28, ಅಕ್ಟೋಬರ್‌ 11, ಅಕ್ಟೋಬರ್‌ 29 ಹಾಗೂ ನವಂಬರ್‌ 20ರಂದು ಕ್ರಮವಾಗಿ 60 ಲಕ್ಷ, 70 ಲಕ್ಷ, 80 ಲಕ್ಷ ಹಾಗೂ 90 ಲಕ್ಷ ಪ್ರಕರಣಗಳು ದಾಖಲಾಗಿದ್ದವು.

ಕೋವಿಡ್‌ ಪ್ರಕರಣಗಳ ಒಟ್ಟು ಸಂಖ್ಯೆ2020ರ ಡಿಸೆಂಬರ್‌ 19ರಂದು ಒಂದು ಕೋಟಿ, 2021ರ ಮೇ 4 ರಂದು ಎರಡು ಕೋಟಿ ಹಾಗೂ ಜೂನ್‌ 23ರಂದು ಮೂರು ಕೋಟಿಗಡಿ ದಾಟಿತ್ತು. ಈ ಸಂಖ್ಯೆಇದೇ ವರ್ಷ (2022) ಜನವರಿ 25ರಂದು ನಾಲ್ಕು ಕೋಟಿಗಿಂತ ಹೆಚ್ಚಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.