ADVERTISEMENT

ಇನ್ನೊಂದು ತಿಂಗಳಲ್ಲಿ ಕೋವಿಡ್ ಲಸಿಕೆ: ಯೋಗಿ ಆದಿತ್ಯನಾಥ್

ಏಜೆನ್ಸೀಸ್
Published 11 ಡಿಸೆಂಬರ್ 2020, 13:17 IST
Last Updated 11 ಡಿಸೆಂಬರ್ 2020, 13:17 IST
ಯೋಗಿ ಆದಿತ್ಯನಾಥ್‌
ಯೋಗಿ ಆದಿತ್ಯನಾಥ್‌    

ನವದೆಹಲಿ: ಮಹಾಮಾರಿ ಕೊರೊನಾವೈರಸ್‌ಗೆ ಯಾವಾಗ ಔಷಧಿ ದೊರಕಲಿದೆ ಎಂಬುದಕ್ಕೆ ಸ್ಪಷ್ಟ ದಿನಾಂಕ ನಿಗದಿಯಾಗಿಲ್ಲ. ಈ ಮಧ್ಯೆ ಹೇಳಿಕೆ ಕೊಟ್ಟಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮುಂದಿನ ಒಂದು ತಿಂಗಳೊಳಗೆ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

'ನಾವು ಕೋವಿಡ್-19 ಲಸಿಕೆಯಿಂದ ಸುಮಾರು ಒಂದು ತಿಂಗಳು ದೂರದಲ್ಲಿದ್ದೇವೆ ಎಂದು ಹೇಳಿದರು. ಅಲ್ಲದೆ ರಾಜ್ಯವು ಈಗಾಗಲೇ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ ಎಂದರು'.

ಅಮೆರಿಕದಂತಹ ಅಭಿವೃದ್ಧಿ ಹೊಂದಿದ ದೇಶದಲ್ಲಿ ಕೋವಿಡ್ 19 ಸಾವಿನ ಪ್ರಮಾಣ ಶೇಕಡಾ 8ರಷ್ಟಿದೆ. ಆದರೆ ಈ ಪ್ರಮಾಣವು ಉತ್ತರ ಪ್ರದೇಶದಲ್ಲಿ ಕೇವಲ ಶೇ. 1.04 ರಷ್ಟಾಗಿದೆ ಎಂದು ಹೇಳಿದರು.

ADVERTISEMENT

ಗೋರಖ್‌ಪುರದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ನಡೆದ ಆರೋಗ್ಯಕರ ಪೂರ್ವ ಉತ್ತರ ಪ್ರದೇಶ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಆತಿಥಿಯಾಗಿ ಭಾಗವಹಿಸಿದ ಯೋಗಿ ಆದಿತ್ಯನಾಥ್, ಕೊರೊನಾ ವೈರಸ್ ಲಸಿಕೆ ಲಭ್ಯತೆಯ ಬಗ್ಗೆ ಮಾಹಿತಿ ನೀಡಿದರು.

ಕೋವಿಡ್ ನಿರ್ವಹಣೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಭಾರಿ ಪ್ರಶಂಸೆ ದೊರಕಿದೆ ಎಂಬುದನ್ನು ಉಲ್ಲೇಖಿಸಿರುವ ಆದಿತ್ಯನಾಥ್, ಈ ಬಗ್ಗೆ ಪ್ರಬಂಧವನ್ನು ಮಾಡಬೇಕು ಎಂದು ಹೇಳಿದರು.

ಟೀಮ್ ವರ್ಕ್ ಯಾವಾಗಲೂ ಅತ್ಯುತ್ತಮ ಫಲಿತಾಂಶವನ್ನು ನೀಡುತ್ತದೆ. ಏಮ್ಸ್‌ನಂತಹ ಸಂಸ್ಥೆಗಳು ಈ ವಿಷಯದಲ್ಲಿ ತಮ್ಮ ಪಾತ್ರವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.