ADVERTISEMENT

ಪಕ್ಷದ ಕಾರ್ಯಕರ್ತರು ಒಂದು ಹೊತ್ತಿನ ಊಟ ತ್ಯಜಿಸಿ: ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 14:51 IST
Last Updated 6 ಏಪ್ರಿಲ್ 2020, 14:51 IST
   

ನವದೆಹಲಿ:ಲಾಕ್‌ಡೌನ್ ಸಂದರ್ಭದಲ್ಲಿ ಕಷ್ಟಗಳನ್ನು ಎದುರಿಸುತ್ತಿರುವ ಜನರಿಗೋಸ್ಕರ ಪಕ್ಷದ ಕಾರ್ಯಕರ್ತರು ಒಂದು ಹೊತ್ತಿನ ಊಟ ತ್ಯಜಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕರೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, 'ಭಾರತವು ಕೋವಿಡ್‌-19 ವಿರುದ್ದ ಹೋರಾಡುತ್ತಿರುವ ಸಂದರ್ಭದಲ್ಲಿ ನಾವು ನಮ್ಮ ಪಕ್ಷದ 40 ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದೇವೆ. ಪಕ್ಷದ ಕಾರ್ಯಕರ್ತರು ನಡ್ಡಾ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು' ತಿಳಿಸಿದ್ದಾರೆ.

ಅಗತ್ಯವಿರುವವರಿಗೆ ಆಹಾರ ಪ್ಯಾಕೆಟ್‌ಗಳನ್ನು ಒದಗಿಸಬೇಕು, ಮನೆಯಲ್ಲಿ ತಯಾರಿಸಿದ ಫೇಸ್ ಕವರ್‌ಗಳನ್ನು ವಿತರಿಸಬೇಕು ಮತ್ತು ತುರ್ತು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಲು ಜನರ ಸಹಿಯನ್ನು ಪಡೆದುಕೊಳ್ಳಬೇಕು ಎಂದು ನಡ್ಡಾ ಕೋರಿದ್ದಾರೆ.

ADVERTISEMENT

ಆರೋಗ್ಯ ವೃತ್ತಿಪರರು, ನೈರ್ಮಲ್ಯ ಕಾರ್ಮಿಕರು, ಪೊಲೀಸರು, ಬ್ಯಾಂಕ್ ಮತ್ತು ಅಂಚೆ ನೌಕರರು ಇತರರು ಕೆಲಸ ಮಾಡುತ್ತಿದ್ದಾರೆ ಅವರಿಗೆ ಸಹಾಯವಾಗಿ ಕಾರ್ಯಕರ್ತರು ನಿಲ್ಲಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ನಡ್ಡಾ ತಿಳಿಸಿದ್ದಾರೆ.

'ಬಿಜೆಪಿ ಎಲ್ಲಾ ಕಾರ್ಯಕರ್ತಗಳು ತಮ್ಮ ಪಕ್ಷದ ವಾರ್ಷಿಕೋತ್ಸವ ದಿನದಿಂದ ಒಂದು ಹೊತ್ತಿನ ಊಟ ತ್ಯಜಿಸಬೇಕು. ಲಾಕ್‌ಡೌನ್‌ ಸಮಯದಲ್ಲಿ ಕಷ್ಟಗಳನ್ನು ಎದುರಿಸುತ್ತಿರುವ ಜನರೊಂದಿಗೆ ನಾವಿದ್ದೇವೆ ಎಂದು ಒಗ್ಗಟ್ಟನ್ನು ಪ್ರದರ್ಶಿಸುವ ಮಾರ್ಗ ಇದಾಗಿದೆ' ಎಂದು ನಡ್ಡಾ ಹೇಳಿದ್ದಾರೆ.

ನಡ್ಡಾ ಅವರ ಮಾರ್ಗದರ್ಶನಗಳನ್ನು ಪಾಲಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.