ADVERTISEMENT

Covid-19 India Update: ಕಳೆದ 24 ಗಂಟೆಗಳಲ್ಲಿ 8,895 ಕೋವಿಡ್ ಪ್ರಕರಣ ದೃಢ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಡಿಸೆಂಬರ್ 2021, 6:42 IST
Last Updated 5 ಡಿಸೆಂಬರ್ 2021, 6:42 IST
   

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 8,895 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 2,796 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಒಂದೇ ದಿನ 6,918 ಮಂದಿ ಕೋವಿಡ್‌ನಿಂದ ಚೇತರಿಸಿಕೊಂಡಿದ್ದು, ಈ ವರೆಗೆ ಒಟ್ಟು 34,060,774 ಸೋಂಕಿತರು ಗುಣಮುಖರಾಗಿದ್ದಾರೆ.

ಇಲ್ಲಿವರೆಗೆ ದೇಶದಾದ್ಯಂತ 3,46,33,255 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 4,73,326 ಮಂದಿ ಮೃತಪಟ್ಟಿದ್ದಾರೆ.ಒಟ್ಟು 99,155 ಸಕ್ರಿಯ ಪ್ರಕರಣಗಳಿವೆ.

ADVERTISEMENT

ಕೇರಳ ಮತ್ತು ಬಿಹಾರ ಸರ್ಕಾರಗಳು ಕೆಲ ದಿನಗಳಿಂದ ಸಾವಿನ ಕುರಿತ ಸಂಖ್ಯೆಗಳನ್ನು ನೀಡಿರಲಿಲ್ಲ. ಇಂದು(ಭಾನುವಾರ) ಎಲ್ಲಾ ಸಾವಿನ ಸಂಖ್ಯೆಗಳನ್ನು ಒಟ್ಟಿಗೆ ನೀಡಿದ್ದರಿಂದ, ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.