ADVERTISEMENT

ದೇಶದ ಪ್ರತಿ ಒಂದು ಲಕ್ಷ ಜನಸಂಖ್ಯೆಯಲ್ಲಿ ಕೋವಿಡ್‌ಗೆ ಒಬ್ಬರ ಸಾವು

ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ

ಪಿಟಿಐ
Published 23 ಜೂನ್ 2020, 14:06 IST
Last Updated 23 ಜೂನ್ 2020, 14:06 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ಕೋವಿಡ್‌–19 ಜಾಗತಿಕ ಸರಾಸರಿ ಮರಣ ಪ್ರಮಾಣ 6.04ರಷ್ಟಿದ್ದರೆ, ಭಾರತದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಕೋವಿಡ್‌–19ನಿಂದ ಒಂದು ಸಾವು ದಾಖಲಾಗುತ್ತಿದ್ದು, ಇದು ವಿಶ್ವದಲ್ಲೇ ಅತಿ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಮಂಗಳವಾರ ತಿಳಿಸಿದೆ.

ಪ್ರತಿ ಲಕ್ಷ ಜನಸಂಖ್ಯೆಗೆ ಬ್ರಿಟನ್‌ನಲ್ಲಿ 63.13, ಸ್ಪೇನ್‌ನಲ್ಲಿ 60.60, ಇಟಲಿಯಲ್ಲಿ 57.19, ಅಮೆರಿಕದಲ್ಲಿ 36.30, ಜರ್ಮನಿಯಲ್ಲಿ 27.32, ಬ್ರಿಜಿಲ್‌ನಲ್ಲಿ 23.68 ಹಾಗೂ ರಷ್ಯಾದಲ್ಲಿ 5.62 ಕೊರೊನಾ ವೈರಸ್‌ ಸಂಬಂಧಿಸಿದ ಸಾವು ದಾಖಲಾಗುತ್ತಿದೆ ಎಂದು ಜೂನ್‌ 22ರಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವವರದಿಯನ್ನು ಸಚಿವಾಲಯ ಉಲ್ಲೇಖಿಸಿದೆ.

‘ಶೀಘ್ರದಲ್ಲೇ ಸೋಂಕು ಪತ್ತೆ, ಸಂಪರ್ಕಿತರ ಪತ್ತೆ, ಹೆಚ್ಚಿನ ಪರೀಕ್ಷೆಗಳಿಂದಾಗಿ ದೇಶದಲ್ಲಿ ಮರಣ ಪ್ರಮಾಣ ಕಡಿಮೆ ಇದೆ’ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.