ADVERTISEMENT

Covid India Update| ಏರುಗತಿಯಲ್ಲಿದ್ದ ಕೋವಿಡ್‌ ಪ್ರಕರಣಗಳಲ್ಲಿ ಅಲ್ಪ ಇಳಿಕೆ

ಏಜೆನ್ಸೀಸ್
Published 27 ಫೆಬ್ರುವರಿ 2021, 4:50 IST
Last Updated 27 ಫೆಬ್ರುವರಿ 2021, 4:50 IST
ಮುಂಬೈನ ರೈಲ್ವೆ ಟರ್ಮಿನಲ್‌ನಲ್ಲಿ ನಡೆಯುತ್ತಿದ್ದ ಪ್ರಯಾಣಿಕರ ಪರೀಕ್ಷೆ (ಸಂಗ್ರಹ ಚಿತ್ರ- ಎಎಫ್‌ಪಿ )
ಮುಂಬೈನ ರೈಲ್ವೆ ಟರ್ಮಿನಲ್‌ನಲ್ಲಿ ನಡೆಯುತ್ತಿದ್ದ ಪ್ರಯಾಣಿಕರ ಪರೀಕ್ಷೆ (ಸಂಗ್ರಹ ಚಿತ್ರ- ಎಎಫ್‌ಪಿ )    

ದೆಹಲಿ: ಕಳೆದ ಕೆಲ ದಿನಗಳಿಂದ ದೇಶದಲ್ಲಿ ಸತತ ಏರಿಕೆ ಕಾಣುತ್ತಿದ್ದ ಕೋವಿಡ್‌ ಪ್ರಕರಣಗಳು ಇಂದು ಅಲ್ಪ ಪ್ರಮಾಣದಲ್ಲಿ ಕುಸಿದಿವೆ.

ಶುಕ್ರವಾರ 16,577 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಶನಿವಾರ ಬೆಳಗ್ಗೆ 16,488 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಏರುಗತಿಯಲ್ಲಿದ್ದ ಕೋವಿಡ್‌ ಕೊಂಚ ಇಳಿದಂತಾಗಿದೆ.

ಇನ್ನು, 'ಈ 24 ಗಂಟೆಗಳ ಅವಧಿಯಲ್ಲಿ 113 ಮಂದಿ ಕೋವಿಡ್‌ಗೆ ಪ್ರಾಣ ತೆತ್ತಿದ್ದಾರೆ. 12,771 ಮಂದಿ ಗುಣಮುಖರಾಗಿದ್ದಾರೆ,' ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಒದಗಿಸಿದೆ.

ADVERTISEMENT

ದೇಶದಲ್ಲಿ ಒಟ್ಟಾರೆ 1,10,79,979 ಕೋವಿಡ್‌ ಪ್ರಕರಣಗಳು ದೃಢವಾಗಿವೆ. 1,07,63,451 ಮಂದಿ ಗುಣಮುಖರಾಗಿದ್ದಾರೆ. 1,56,938 ಮಂದಿ ಈ ವರೆಗೆ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ಸದ್ಯ ದೇಶದಲ್ಲಿರುವುದು 1,59,590 ಸಕ್ರಿಯ ಪ್ರಕರಣಗಳಷ್ಟೇ.

ಕಳೆದೊಂದು ತಿಂಗಳಿಂದ ನಡೆಯುತ್ತಿರುವ ಲಸಿಕೆ ಅಭಿಯಾನದಲ್ಲಿ ಒಟ್ಟು 1,42,42,547 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.