
ಪಿಟಿಐ
ಭುವನೇಶ್ವರ: ಹೆಸರಾಂತ ಶಿಲ್ಪಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ರಾಜ್ಯಸಭೆ ಸದಸ್ಯ ರಘುನಾಥ ಮೊಹಾಪಾತ್ರ (78) ಭಾನುವಾರ ಕೋವಿಡ್‌ನಿಂದಾಗಿ ಮೃತಪಟ್ಟರು.
ಸೋಂಕು ದೃಢಪಟ್ಟ ನಂತರ ಅವರನ್ನು ಏ. 22ರಂದು ಇಲ್ಲಿನ ಏಮ್ಸ್‌ಗೆ ದಾಖಲು ಮಾಡಲಾಗಿತ್ತು. ‘ವೈದ್ಯರ ಅವಿರತ ಪ್ರಯತ್ನಗಳ ನಡುವೆಯೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಮಧ್ಯಾಹ್ನ ಮೃತಪಟ್ಟರು’ ಎಂದು ಏಮ್ಸ್‌ನ ನಿರ್ದೇಶಕಿ ಡಾ.ಗೀತಾಂಜಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.