ADVERTISEMENT

ಕೋವಿಡ್‌: 181 ಕೋಟಿ ಡೋಸ್‌ ಲಸಿಕೆ ನೀಡಿಕೆ, ಕೇಂದ್ರ ಮಾಹಿತಿ

ಪಿಟಿಐ
Published 25 ಮಾರ್ಚ್ 2022, 10:31 IST
Last Updated 25 ಮಾರ್ಚ್ 2022, 10:31 IST
ಮನ್‌ಸುಖ್‌ ಮಾಂಡವೀಯ
ಮನ್‌ಸುಖ್‌ ಮಾಂಡವೀಯ   

ನವದೆಹಲಿ: ದೇಶದಲ್ಲಿ ಇದುವರೆಗೆ 15 ವರ್ಷ ಮೇಲ್ಪಟ್ಟ 101.3 ಕೋಟಿ ಜನರಿಗೆ ಲಸಿಕೆ ನೀಡಲಾಗಿದ್ದು, ಮಾರ್ಚ್‌ 21ರ ವೇಳೆಗೆ 181.24 ಕೋಟಿ ಡೋಸ್‌ ಲಸಿಕೆ ಸಾಧನೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಶುಕ್ರವಾರ ತಿಳಿಸಿದೆ.

ಸಂಸತ್‌ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ, ಜನವರಿ ವೇಳೆಗೆ 9.71 ಕೋಟಿ ಮೊದಲ ಡೋಸ್‌, ಫೆಬ್ರುವರಿಯಲ್ಲಿ 2.22 ಕೋಟಿ ಡೋಸ್‌ ನೀಡಲಾಗಿದೆ. ವರ್ಷಾಂತ್ಯಕ್ಕೆ ಎಲ್ಲಾ ವಯಸ್ಕರಿಗೂ ಸಂಪೂರ್ಣ ಲಸಿಕೆ ನೀಡುವ ಗುರಿ ಸಾಧನೆಯು ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.

ಲಸಿಕೆ ಪಡೆದ ಫಲಾನುಭವಿಗಳ ಪೈಕಿ 96.81 ಕೋಟಿ ಜನರು ಮೊದಲ ಡೋಸ್‌, 82.09 ಕೋಟಿ ಜನರು ಎರಡೂ ಡೋಸ್‌ ಪಡೆದಿದ್ದಾರೆ. 2.17 ಕೋಟಿ ಜನರು ಮುನ್ನೆಚ್ಚರಿಕೆ ಡೋಸ್‌ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.