ADVERTISEMENT

ಕೋವಿಡ್ ಲಸಿಕೆ ದರ: ಸ್ವದೇಶಿ ಜಾಗರಣ ಮಂಚ್‌ ಆಕ್ಷೇಪ

ಪಿಟಿಐ
Published 2 ಮೇ 2021, 17:37 IST
Last Updated 2 ಮೇ 2021, 17:37 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ‘ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್‌–19 ಲಸಿಕಾ ತಯಾರಕರು ಘೋಷಿಸಿರುವ ಬೆಲೆ ದುಬಾರಿಯಾಗಿದೆ’ ಎಂದು ಆರ್‌ಎಸ್‌ಎಸ್ ಅಂಗಸಂಸ್ಥೆ ಸ್ವದೇಶಿ ಜಾಗರಣ್‌ ಮಂಚ್‌(ಎಸ್‌ಜೆಎಂ) ತಿಳಿಸಿದೆ.

ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಬೆಲೆಗಳನ್ನು ಉಲ್ಲೇಖಿಸಿ ಹೇಳಿರುವ ಸಂಘಟನೆ, ಲಸಿಕೆಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಕೇಂದ್ರವು ವೆಚ್ಚವನ್ನು ಭರಿಸಬೇಕು ಎಂದಿದೆ.

‘ಜನರಿಗೆ ಅಗತ್ಯಕ್ಕೆ ಅನುಗುಣವಾಗಿ ಲಭ್ಯವಾಗುವುದರ ಜೊತೆಗೆ ಕೈಗೆಟಕುವ ಬೆಲೆಗೆ ದೊರಕುವಂತಾಗಲು ಲಸಿಕೆ ತಯಾರಿಸಲು ಹೆಚ್ಚಿನ ಕಂಪನಿಗಳಿಗೆ ಅವಕಾಶ ನೀಡಬೇಕು’ ಎಂದು ಮಂಚ್‌ನ ಸಹ ಸಂಚಾಲಕ ಅಶ್ವನಿ ಮಹಾಜನ್‌ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.