ADVERTISEMENT

ಧಾರವಾಡದಲ್ಲಿ ಕೋವಿಡ್‌ ಲಸಿಕೆ ಉತ್ಪಾದನೆ: ಮೈಲ್ಯಾಬ್‌, ಶಿಲ್ಪಾ ಮೆಡಿಕೇರ್‌ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 16:00 IST
Last Updated 11 ಫೆಬ್ರುವರಿ 2022, 16:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಪುಣೆ ಮೂಲದ ಮೈಲ್ಯಾಬ್ ಡಿಸ್ಕವರಿ ಸೊಲೂಷನ್ಸ್‌ ಕಂಪನಿಯು ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಪಾಲುದಾರಿಕೆಯಲ್ಲಿ ಕೋವಿಡ್–19 ಲಸಿಕೆ ಉತ್ಪಾದಿಸಲಿದೆ.

ಶಿಲ್ಪಾ ಮೆಡಿಕೇರ್‌ನಅಂಗಸಂಸ್ಥೆಯಾದ ಶಿಲ್ಪಾ ಬಯೋಲಾಜಿಕಲ್ಸ್‌ ಪ್ರೈವೇಟ್‌ ಲಿಮಿಟೆಡ್‌ ಧಾರವಾಡದಲ್ಲಿ ಹೊಂದಿರುವ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಯಾರಿಕೆ ಘಟಕದಲ್ಲಿ ಈ ಲಸಿಕೆಯನ್ನು ಉತ್ಪಾದಿಸಲಾಗುತ್ತದೆ ಎಂದು ಉಭಯ ಕಂಪನಿಗಳು ಶುಕ್ರವಾರ ಪ್ರಕಟಿಸಿವೆ.

ಲಸಿಕೆ ಉತ್ಪಾದನೆ ಇದೇ ಮಾರ್ಚ್‌ನಲ್ಲಿ ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದು ಮೈಲ್ಯಾಬ್‌ನ ಕಾರ್ಪೋರೇಟ್ ವ್ಯವಹಾರಗಳ ನಿರ್ದೇಶಕ ಸುಜಿತ್‌ ಜೈನ್‌ ತಿಳಿಸಿದ್ದಾರೆ.

ADVERTISEMENT

‘ಜಾಗತಿಕ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಲಸಿಕೆ ಪೂರೈಸುವ ಗುರಿ ಹೊಂದಲಾಗಿದೆ’ ಎಂದು ಶಿಲ್ಪಾ ಬಯೋಲಾಜಿಕಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿನಯ್ ಕೋಣಾಜೆ ಹೇಳಿದ್ದಾರೆ.

ಶಿಲ್ಪಾ ಬಯೋಲಾಜಿಕಲ್ಸ್‌ ವಿವಿಧ ಲಸಿಕೆಗಳು ಹಾಗೂ ಇತರ ಔಷಧಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.