ನವದೆಹಲಿ: ದೇಶದಲ್ಲಿ 24,010 ಹೊಸ ಕೋವಿಡ್–19 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 99.56 ಲಕ್ಷಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 94.89 ಲಕ್ಷಕ್ಕೆ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಗುರುವಾರ ತಿಳಿಸಿದೆ.
ಕೋವಿಡ್–19ಗೆ 355 ಜನರು ಮೃತಪಟ್ಟಿದ್ದು, ಈ ಪೈಕಿ ಮಹಾರಾಷ್ಟ್ರದ 95 ಜನರು, ಪಶ್ಚಿಮ ಬಂಗಾಳದ 46 ಹಾಗೂ ದೆಹಲಿಯ 32 ಮತ್ತು ಕೇರಳದ 27 ಜನರಿದ್ದಾರೆ. ಒಟ್ಟು ಮೃತರ ಸಂಖ್ಯೆ 1,44,451ಕ್ಕೆ ಏರಿಕೆಯಾಗಿದೆ.
ಗುಣಮುಖ ಪ್ರಮಾಣವು ಶೇ 95.31ಕ್ಕೆ ಏರಿಕೆಯಾಗಿದ್ದು, ಕಳೆದ 11 ದಿನದಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ ಪ್ರಸ್ತುತ 3,22,366 ಸಕ್ರಿಯ ಕೋವಿಡ್–19 ಪ್ರಕರಣಗಳಿವೆ. ಒಟ್ಟು 15.78 ಕೋಟಿ ಕೋವಿಡ್–19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.
ದೇಶದಲ್ಲಿ ಕೋವಿಡ್–19 ಪ್ರಕರಣಗಳ ಏರಿಕೆ
ಆಗಸ್ಟ್ 7: 20 ಲಕ್ಷ
ಆ. 23: 30 ಲಕ್ಷ
ಸೆ.5 :40 ಲಕ್ಷ
ಸೆ.16: 50 ಲಕ್ಷ
ಸೆ.28: 60 ಲಕ್ಷ
ಅ.11: 70 ಲಕ್ಷ
ಅ.29: 80 ಲಕ್ಷ
ನ.20: 90 ಲಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.