ADVERTISEMENT

ಕೋವಿಡ್‌–19: ದೆಹಲಿಯಲ್ಲಿ ದಿಗ್ಬಂಧಿತ ವಲಯಗಳು 43ಕ್ಕೆ ಏರಿಕೆ

ಏಜೆನ್ಸೀಸ್
Published 13 ಏಪ್ರಿಲ್ 2020, 7:08 IST
Last Updated 13 ಏಪ್ರಿಲ್ 2020, 7:08 IST
ದೆಹಲಿ ದಿಗ್ಬಂಧಿತ ಪ್ರದೇಶ
ದೆಹಲಿ ದಿಗ್ಬಂಧಿತ ಪ್ರದೇಶ   

ನವದೆಹಲಿ: ಕೋವಿಡ್‌–19 ದೃಢಪಟ್ಟ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ರಾಷ್ಟ್ರ ರಾಜಧಾನಿಯಲ್ಲಿ ದಿಗ್ಬಂಧಿತ ವಲಯಗಳ ಸಂಖ್ಯೆಯೂ ಹೆಚ್ಚುತ್ತಿವೆ. ಆಗ್ನೇಯ ದೆಹಲಿಯಲ್ಲಿಯೇ ಅಂಥ 12 ವಲಯಗಳು ಸೇರಿದಂತೆ ಒಟ್ಟು 43 ಪ್ರದೇಶಗಳಲ್ಲಿ ದಿಗ್ಬಂಧನ ವಿಧಿಸಲಾಗಿದೆ.

ಸೋಮವಾರ ಬೆಳಗಿನ ವರೆಗೂ ದೆಹಲಿಯ 33 ಭಾಗಗಳನ್ನು ಕೊರೊನಾ ವೈರಸ್‌ ಸೋಂಕು ಹರಡುವ ಹಾಟ್‌ಸ್ಪಾಟ್‌ಗಳಾಗಿ ಗುರುತಿಸಲಾಗಿದೆ. ಈ ಸಾಲಿಗೆ ಹೊಸದಾಗಿ 10 ವಲಯಗಳು ಸೇರ್ಪಡೆಯಾಗಿವೆ. ದಿಗ್ಬಂಧಿತ ವಲಯವೆಂದು ಘೋಷಣೆಯಾಗುತ್ತಿದ್ದಂತೆ ಜಿಲ್ಲಾಡಳಿ ನಿಗದಿತ ಪ್ರದೇಶದ ಮೇಲೆ ಪೂರ್ಣ ನಿರ್ಬಂಧ ಹೇರುವ ಮೂಲಕ ವೈರಸ್‌ ಸೊಂಕು ವ್ಯಾಪಿಸದಂತೆ ಕ್ರಮವಹಿಸುತ್ತಾರೆ.

'ಯಾವುದೇ ಪ್ರದೇಶದಲ್ಲಿ 3 ಅಥವಾ ಅದಕ್ಕಿಂತಲೂ ಹೆಚ್ಚು ಪ್ರಕರಣಗಳಲ್ಲಿ ಕೋವಿಡ್‌–19 ದೃಢಪಟ್ಟರೆ, ಆ ಭಾಗವನ್ನು ಕೊರೊನಾ ಸೋಂಕು ಹರಡುವ ಹಾಟ್‌ಸ್ಪಾಟ್‌ ಎಂದು ಘೋಷಿಸಲಾಗುತ್ತದೆ' ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಹೇಳಿದ್ದಾರೆ.

ADVERTISEMENT

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ಸೋಮವಾರ ಬೆಳಗಿನ ವರೆಗೂದೆಹಲಿಯಲ್ಲಿ ಒಟ್ಟು 1,154 ಕೊರೊನಾ ವೈರಸ್‌ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ24 ಮಂದಿ ಸಾವಿಗೀಡಾಗಿದ್ದಾರೆ.

ದಿಗ್ಬಂಧಿತ ವಲಯಗಳಲ್ಲಿ ಕಟ್ಟು ನಿಟ್ಟಿನ ಕ್ರಮವಹಿಸಿ ಗಮನಿಸುವಂತೆ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್‌ ದೇವ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪೂರ್ವ ದೆಹಲಿಯಲ್ಲಿ ಐದು, ಶಾಹದರಾದಲ್ಲಿ ಐದು ವಲಯ ಹಾಗೂ ಪೂರ್ವ ದೆಹಲಿ ಭಾಗದಲ್ಲಿ ನಾಲ್ಕು ವಲಯಗಳು ದಿಗ್ಬಂಧನಕ್ಕೆ ಒಳಗಾಗಿವೆ.

ಇನ್ನೂ ದೆಹಲಿಯ ದಕ್ಷಿಣ ಭಾಗ, ಈಶಾನ್ಯ, ಸೆಂಟ್ರಲ್‌ ಭಾಗದಲ್ಲಿ ತಲಾ 3 ವಲಯಗಳು; ನವದೆಹಲಿ, ಉತ್ತರ ದೆಹಲಿಯಲ್ಲಿ ತಲಾ ಎರಡು ವಲಯಗಳು; ವಸುಂದರಾ ಎನ್‌ಕ್ಲೇವ್‌ನ ಮನಸ್ತಾರಾ ಅಪಾರ್ಟ್‌ಮೆಂಟ್‌, ಪಾಂಡವ್‌ ನಗರದ ಸ್ಟ್ರೀಟ್‌ ನಂ.9, ಮಯೂರ್‌ ವಿಹಾರ್‌ ಫೇಸ್‌–1ನಲ್ಲಿರುವ ವರ್ಧಮಾನ್‌ ಅಪಾರ್ಟ್‌ಮೆಂಟ್‌ಗಳು 43 ದಿಗ್ಬಂಧಿತ ವಲಯಗಳಲ್ಲಿ ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.