ನವದೆಹಲಿ: ‘ಕೋವಿಡ್–19 ಲಸಿಕೆಯ ಸ್ಲಾಟ್‌ಗಳನ್ನು ಈಗ ವಾಟ್ಸ್ಆ್ಯಪ್ ಮೂಲಕವು ಬುಕ್ ಮಾಡಬಹುದು’ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರು ಮಂಗಳವಾರ ತಿಳಿಸಿದರು.
‘ಮೊದಲು ವಾಟ್ಸ್ಆ್ಯಪ್ ಮೂಲಕ ಮೈಗಾವ್‌ಇಂಡಿಯಾ ಕೊರೊನಾ ಹೆಲ್ಪ್‌ಡೆಸ್ಕ್‌ಗೆ (MyGovIndia Corona Helpdesk) ‘ಬುಕ್‌ಸ್ಲಾಟ್’ ಎಂಬ ಸಂದೇಶವನ್ನು ಕಳುಹಿಸಬೇಕು. ಒಟಿಪಿ ಪರಿಶೀಲನೆ ಬಳಿಕ ಸೂಚಿಸಲಾಗುವ ಕ್ರಮಗಳನ್ನು ಅನುಸರಿಸಬೇಕು’ ಎಂದು ಅವರು ಪ್ರಕ್ರಿಯೆಯನ್ನು ವಿವರಿಸಿದರು.
‘ಹೊಸ ಯುಗದ ನಾಗರಿಕರ ಅನುಕೂಲಕ್ಕಾಗಿ ಇದನ್ನು ರೂಪಿಸಲಾಗಿದೆ. ಈಗ ಕೆಲವೇ ನಿಮಿಷಗಳೊಳಗೆ ನಿಮ್ಮ ಫೋನ್ ಮೂಲಕ ನೀವು ಸ್ಲಾಟ್ ಬುಕ್ ಮಾಡಬಹುದು.919013151515 ಮೊಬೈಲ್ ಸಂಖ್ಯೆ ಮೂಲಕ ಲಸಿಕೆಯ ಸ್ಲಾಟ್ ಬುಕ್ ಮಾಡಿ’ ಎಂದು ಮಾಂಡವೀಯ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.