
ಪ್ರಾತಿನಿಧಿಕ ಚಿತ್ರ
ಕಣ್ಣೂರು (ಕೇರಳ): ಪ್ರತಿಭಟನೆ ವೇಳೆ ಬಾಂಬ್ ಎಸೆದು ಪೊಲೀಸ್ ಅಧಿಕಾರಿಗಳ ಹತ್ಯೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಸ್ಥಳೀಯ ಚುನಾವಣೆಗಳಿಗೆ ಸ್ಪರ್ಧಿಸಿದ್ದ ಸಿಪಿಎಂ ಅಭ್ಯರ್ಥಿ ಸೇರಿ ಇಬ್ಬರಿಗೆ ದಕ್ಷಿಣ ಕೇರಳ ಜಿಲ್ಲೆಯ ನ್ಯಾಯಾಲಯವು 10 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.
ತಳಿಪರಂಬ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು, ಸಿಪಿಎಂ ಅಭ್ಯರ್ಥಿ ವಿ.ಕೆ.ನಿಶಾದ್ (35) ಮತ್ತು ಟಿ.ಸಿ.ವಿ ನಂದಕುಮಾರ್ (35) ಅವರಿಗೆ ಈ ಶಿಕ್ಷೆಯ ಜೊತೆಗೆ ₹2.5 ಲಕ್ಷ ದಂಡವನ್ನೂ ವಿಧಿಸಿದೆ. ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಸಿಪಿಎಂ ನಾಯಕ ಪಿ.ಜಯರಾಜನ್ ಅವರ ಬಂಧನದ ವಿರುದ್ಧ 2012 ಆಗಸ್ಟ್ 1ರಂದು ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ನಾಡ ಬಾಂಬ್ ಎಸೆಯಲಾಗಿತ್ತು.
ನಿಶಾದ್ ಅವರು ನಾಮಪತ್ರ ಸಲ್ಲಿಸುವಾಗ ನ್ಯಾಯಾಲಯದ ತೀರ್ಪು ಪ್ರಕಟವಾಗಿರಲಿಲ್ಲ. ಹೀಗಾಗಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಕಾನೂನಿನ ಯಾವುದೇ ಅಡ್ಡಿ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.