ADVERTISEMENT

ಸೋಲಾನಿ ನದಿಯ ಪ್ರವಾಹಕ್ಕೆ ಕೊಚ್ಚಿ ಹೋದ ಸ್ಮಶಾನ

ಪಿಟಿಐ
Published 19 ಆಗಸ್ಟ್ 2025, 9:07 IST
Last Updated 19 ಆಗಸ್ಟ್ 2025, 9:07 IST
   

ಹರಿದ್ವಾರ : ನಿರಂತರ ಮಳೆಯಿಂದಾಗಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನಿರಂತರ ಮಳೆಗೆ ಅಲವಾಲ್ಪುರ್ ಗ್ರಾಮದ ಸ್ಮಶಾನವೊಂದು ಸೋಲಾನಿ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ ಎಂದು ಹೇಳಲಾಗಿದೆ.

ಸೋಲನ್ ಜಿಲ್ಲೆ ಮೂಲಕ ಹಾದು ಹೋಗುವ ಗಂಗಾ ನದಿ ನೀರು ಹೆಚ್ಚಳದಿಂದ ನದಿ ದಡದಲ್ಲಿ ವಾಸಿಸುವ ಜನರಿಗೆ ಜಾಗರೂಕರಾಗಿರಲು ಅಧಿಕಾರಿಗಳು ತಿಳಿಸಿದ್ದಾರೆ. ತಗ್ಗು ಪ್ರದೇಶಗಳ ಮನೆಗಳು, ಹೊಲಗಳು ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ.

ಅಪಾಯ ಮಟ್ಟದಲ್ಲಿರುವ ಜಿಲ್ಲೆಗಳ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ಪಡೆದು ಸುರಕ್ಷತೆಗೆ ಸೂಚಿಸಲಾಗಿದೆ ಎಂದು ನೀರಾವರಿ ಇಲಾಖೆಯ ಅಧಿಕಾರಿಯಾದ ಭರತ್ ಭೂಷಣ್ ಶರ್ಮಾ ಹೇಳಿದ್ದಾರೆ.

ADVERTISEMENT

ಹರಿದ್ವಾರದಲ್ಲಿ ಭಾರಿ ಮಳೆಯಿಂದ ನದಿಗಳು ಹಾಗೂ ಹೊಳೆಗಳು ತುಂಬಿ ಹರಿಯುತ್ತಿವೆ. ಕೆಲವು ನಗರ ಪ್ರದೇಶಗಳಲ್ಲಿ 2-3 ಅಡಿ ಎತ್ತರದಷ್ಟು ನೀರು ತುಂಬಿ ಜನ ಜೀವನ ಅಸ್ತವ್ಯಸ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.