ADVERTISEMENT

ನವೆಂಬರ್‌: ದೇಶಿಯ ವಿಮಾನದಲ್ಲಿ ಪ್ರಯಾಣಿಸಿದವರ ಸಂಖ್ಯೆ 1.05 ಕೋಟಿ- ಡಿಜಿಸಿಎ

ಪಿಟಿಐ
Published 17 ಡಿಸೆಂಬರ್ 2021, 14:17 IST
Last Updated 17 ಡಿಸೆಂಬರ್ 2021, 14:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನವೆಂಬರ್‌ನಲ್ಲಿ ಸುಮಾರು 1.05 ಕೋಟಿ ದೇಶಿಯ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಇದು ಅಕ್ಟೋಬರ್‌ನಲ್ಲಿ ಪ್ರಯಾಣಿಸಿದ 89.95 ಲಕ್ಷ ಪ್ರಯಾಣಿಕರಿಗಿಂತ ಶೇಕಡ 17.03ರಷ್ಟು ಹೆಚ್ಚು ಎಂದು ವಿಮಾನಯಾನ ಪ್ರಾಧಿಕಾರ ಹೇಳಿದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನೀಡಿದ ಅಂಕಿಅಂಶದ ಪ್ರಕಾರ, ಇಂಡಿಗೊ ಸಂಸ್ಥೆಯು ನವೆಂಬರ್‌ ತಿಂಗಳಲ್ಲಿ57.06 ಲಕ್ಷ ಪ್ರಯಾಣಿಕರನ್ನು ಕರೆದೊಯ್ದಿದಿದೆ. ಇದು ಒಟ್ಟು ದೇಶಿಯ ಪ್ರಯಾಣಿಕರ ಪೈಕಿ ಶೇಕಡ54.3ರಷ್ಟು ಭಾಗವನ್ನು ಹೊಂದಿದೆ. ಸ್ಪೈಸ್‌ಜೆಟ್‌ 10.78 ಲಕ್ಷ ಪ್ರಯಾಣಿಕರನ್ನು ಕರೆದೊಯ್ದಿದಿದ್ದು, ಶೇಕಡ 10.3ರಷ್ಟು ಪಾಲನ್ನು ಹಂಚಿಕೊಂಡಿದೆ.

ನವೆಂಬರ್‌ ತಿಂಗಳಲ್ಲಿ ಏರ್‌ ಇಂಡಿಯಾ, ಗೋ ಫಸ್ಟ್‌, ವಿಸ್ತಾರ, ಏರ್‌ ಏಷ್ಯಾ ಇಂಡಿಯಾ ಮತ್ತು ಅಲಯನ್ಸ್‌ ಏರ್‌ ವಿಮಾನಯಾನ ಸಂಸ್ಥೆಗಳಲ್ಲಿ ಕ್ರಮವಾಗಿ9.98 ಲಕ್ಷ,11.56 ಲಕ್ಷ,7.93 ಲಕ್ಷ,6.23 ಲಕ್ಷ ಮತ್ತು1.20 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.