ADVERTISEMENT

ಛತ್ತೀಸ್‌ಗಡ: ಗುಂಡಿನ ಚಕಮಕಿ, ಸಿಆರ್‌ಪಿಎಫ್‌ ಅಧಿಕಾರಿ ಹುತಾತ್ಮ

ಪಿಟಿಐ
Published 12 ಫೆಬ್ರುವರಿ 2022, 15:12 IST
Last Updated 12 ಫೆಬ್ರುವರಿ 2022, 15:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಯಪುರ (ಪಿಟಿಐ): ಛತ್ತೀಸ್‌ಗಡದದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರೊಡನೆ ನಡೆದ ಗುಂಡಿನ ಕಾಳಗದಲ್ಲಿ ಶನಿವಾರ ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಅಧಿಕಾರಿಯೊಬ್ಬರು ಮೃತಪಟ್ಟಿದ್ದು, ಯೋಧರೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡೊಂಗಲ್ ಚಿಂತಾ ನದಿಯ ಬಳಿ ಸಿಆರ್‌ಪಿಎಫ್‌ ಗಸ್ತು ತಂಡವು ಅರಣ್ಯವನ್ನು ಸುತ್ತುವರಿದಾಗ ನಕ್ಸಲ್‌ ಗುಂಪಿನ ಜೊತೆ ಭಾರಿ ಗುಂಡಿನ ಚಕಮಕಿ ನಡೆಯಿತು.ಘಟನೆಯಲ್ಲಿ ಸಿಆರ್‌ಪಿಎಫ್‌ನ 168ನೇ ಬೆಟಾಲಿಯನ್‌ನ ಸಹಾಯಕ ಕಮಾಂಡೆಂಟ್‌ ಅಧಿಕಾರಿ ಶಾಂತಿ ಭೂಷಣ್‌ ತಿರ್ಕೆ ಮೃತಪಟ್ಟಿದ್ದಾರೆ. ಯೋಧ ಅಪ್ಪಾ ರಾವ್‌ ಅವರು ಗಂಭೀರ ಗಾಯಗೊಂಡಿದ್ದಾರೆ’ ಎಂದು ಬಸ್ತರ್‌ ವಲಯದ ಐಜಿಪಿ ಸುಂದರ್‌ ರಾಜ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT