ADVERTISEMENT

ಸಿಯುಇಟಿ– ಯುಜಿ: ಅರ್ಜಿ ಸಲ್ಲಿಕೆಗೆ ಏ.5 ಕೊನೆ ದಿನಾಂಕ

ಪಿಟಿಐ
Published 31 ಮಾರ್ಚ್ 2024, 14:01 IST
Last Updated 31 ಮಾರ್ಚ್ 2024, 14:01 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಯುಇಟಿ– ಯುಜಿ) ಅರ್ಜಿ ಸಲ್ಲಿಸುವ ಕಡೆಯ ದಿನಾಂಕವನ್ನು ಮತ್ತೆ ವಿಸ್ತರಿಸಲಾಗಿದ್ದು, ಏಪ್ರಿಲ್‌ 5ಕ್ಕೆ ನಿಗದಿಪಡಿಸಲಾಗಿದೆ.

‘ಅಭ್ಯರ್ಥಿಗಳು ಮತ್ತು ಸಂಬಂಧಪಟ್ಟವರ ಮನವಿ ಮೇರೆಗೆ 2024ರ ಸಾಲಿನ ಸಿಯುಇಟಿ– ಯುಜಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕಡೆಯ ದಿನಾಂಕವನ್ನು ಏಪ್ರಿಲ್ 5ರ ರಾತ್ರಿ 9.50ರ ವರೆಗೆ ವಿಸ್ತರಿಸಲಾಗಿದೆ’ ಎಂದು ರಾಷ್ಟ್ರೀಯ ಪರೀಕ್ಷಾ ಆಯೋಗದ ಹಿರಿಯ ನಿರ್ದೇಶಕಿ (ಪರೀಕ್ಷೆ) ಸಾಧನಾ ಪರಶರ್‌ ತಿಳಿಸಿದ್ದಾರೆ.    

ADVERTISEMENT

ಅಭ್ಯರ್ಥಿಗಳು ತಮ್ಮ ಗುರುತು ದೃಢೀಕರಣಕ್ಕಾಗಿ ಶಾಲೆಯ ಗುರುತಿನ ಚೀಟಿ ಅಥವಾ ಸರ್ಕಾರದ ಮಾನ್ಯತೆ ಹೊಂದಿರುವ ಯಾವುದಾದರೂ ಗುರುತಿನ ಚೀಟಿ ಜೊತೆ ಭಾವಚಿತ್ರವನ್ನು ಒದಗಿಸಬೇಕು ಎಂದು ಅವರು ಹೇಳಿದ್ದಾರೆ.

ಪ್ರವೇಶ ಪರೀಕ್ಷೆಗಳು ಮೇ 15ರಿಂದ 31ರ ಒಳಗೆ ನಡೆಯಲಿವೆ.

ಈ ಮೊದಲು, ಅರ್ಜಿ ಸಲ್ಲಿಸಲು ಕಡೆಯ ದಿನಾಂಕವನ್ನು ಮಾರ್ಚ್‌ 26ಕ್ಕೆ ನಿಗದಿಪಡಿಸಲಾಗಿತ್ತು, ಆನಂತರ ಮಾರ್ಚ್‌ 31ಕ್ಕೆ ವಿಸ್ತರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.