ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಯುಇಟಿ–ಯುಜಿ) ಒಬ್ಬ ಅಭ್ಯರ್ಥಿ ನಾಲ್ಕು ವಿಷಯಗಳಲ್ಲಿ 100 ಪರ್ಸಂಟೈಲ್ ಗಳಿಸಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಶುಕ್ರವಾರ ತಿಳಿಸಿದೆ.
2025–26ರ ಶೈಕ್ಷಣಿಕ ವರ್ಷದ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಎನ್‌ಟಿಎ, ಕಂಪ್ಯೂಟರ್ ಆಧಾರಿತ ಮಾದರಿಯಲ್ಲಿ (ಸಿಬಿಟಿ) ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ದೇಶದಾದ್ಯಂತ 13.54 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿದ್ದರು. 37 ವಿಷಯಗಳಿಗೆ ಪರೀಕ್ಷೆ ನಡೆಸಲಾಗಿತ್ತು. ವಿದೇಶಗಳ 15 ನಗರಗಳೂ ಸೇರಿದಂತೆ ಒಟ್ಟು 300 ನಗರಗಳಲ್ಲಿ ಈ ಬಾರಿ ಪರೀಕ್ಷೆ ನಡೆದಿತ್ತು.
‘ಒಬ್ಬ ಅಭ್ಯರ್ಥಿ ಐದು ವಿಷಯಗಳಲ್ಲಿ ನಾಲ್ಕರಲ್ಲಿ 100 ಪರ್ಸಂಟೈಲ್ ಗಳಿಸಿದ್ದಾರೆ. 17 ಅಭ್ಯರ್ಥಿಗಳು ಮೂರು ವಿಷಯಗಳಲ್ಲಿ 100 ಪರ್ಸಂಟೈಲ್ ಅಂಕಗಳನ್ನು ಗಳಿಸಿದ್ದಾರೆ. 150 ಅಭ್ಯರ್ಥಿಗಳು ಎರಡು ವಿಷಯಗಳಲ್ಲಿ ಮತ್ತು ಒಟ್ಟು 2,679 ಅಭ್ಯರ್ಥಿಗಳು ಒಂದು ವಿಷಯದಲ್ಲಿ 100 ಪರ್ಸಂಟೈಲ್ ಅಂಕ ಗಳಿಸಿದ್ದಾರೆ’ ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.