ADVERTISEMENT

ಆನ್‌ಲೈನ್ ಹೂಡಿಕೆ ಹೆಸರಲ್ಲಿ ಮೋಸ: ಥಾಣೆಯ ವ್ಯಕ್ತಿಗೆ ₹ 1.18 ಕೋಟಿ ವಂಚನೆ

ಪಿಟಿಐ
Published 8 ಫೆಬ್ರುವರಿ 2025, 12:41 IST
Last Updated 8 ಫೆಬ್ರುವರಿ 2025, 12:41 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಥಾಣೆ: ನಗರದ 44 ವರ್ಷದ ವ್ಯಕ್ತಿಯೊಬ್ಬರು ಷೇರು ಮಾರುಕಟ್ಟೆ ಹೂಡಿಕೆ ಹೆಸರಲ್ಲಿ ₹ 1.18 ಕೋಟಿ ಕಳೆದುಕೊಂಡಿದ್ದು, ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ.

'ಹಣ ಕಳೆದುಕೊಂಡ ವ್ಯಕ್ತಿಗೆ ಜನವರಿಯಲ್ಲಿ 'ಲಾಭದಾಯಕ ಹೂಡಿಕೆ'ಗೆ ಸಂಬಂಧಿಸಿದ ಸಂದೇಶವೊಂದು ವಾಟ್ಸ್‌ಆ್ಯಪ್‌ನಲ್ಲಿ ಬಂದಿತ್ತು' ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

'ಸಂದೇಶವನ್ನು ನಂಬಿದ್ದ ಸಂತ್ರಸ್ತ, ₹ 1.18 ಕೋಟಿ ಹೂಡಿಕೆ ಮಾಡಿದ್ದ. ಸಂದೇಶದಲ್ಲಿ ನೀಡಿದ್ದ ಭರವಸೆಯಂತೆ ಲಾಭವನ್ನು ಪಡೆದುಕೊಳ್ಳಲು ಪ್ರಯತ್ನ ಆರಂಭಿಸಿದಾಗ, ಆರೋಪಿಯು (ಸಂದೇಶ ಕಳುಹಿಸಿದ್ದ ವ್ಯಕ್ತಿಯು) ವಾಟ್ಸ್‌ಆ್ಯಪ್‌ ಸಂವಹನ ನಡೆಸುವುದು ಹಾಗೂ ಕರೆ ಸ್ವೀಕರಿಸುವುದನ್ನು ನಿಲ್ಲಿಸಿದ್ದ. ಹೀಗಾಗಿ, ಸಂತ್ರಸ್ತ ಠಾಣೆ ಮೆಟ್ಟಿಲೇರಿದ್ದ' ಎಂದು ವಿವರಿಸಿದ್ದಾರೆ.

ಆನ್‌ಲೈನ್‌ ವಂಚನೆ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.