ADVERTISEMENT

ಪುದುಚೇರಿಯಲ್ಲಿ ದಾಖಲೆಯ 46 ಸೆಂ.ಮೀ. ಮಳೆ: ಜನಜೀವನ ಅಸ್ತವ್ಯಸ್ತ

ಪಿಟಿಐ
Published 1 ಡಿಸೆಂಬರ್ 2024, 9:19 IST
Last Updated 1 ಡಿಸೆಂಬರ್ 2024, 9:19 IST
<div class="paragraphs"><p>ಭಾರಿ ಮಳೆಗೆ ರಸ್ತೆಗಳು, ಮನೆಗಳು ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.</p></div>

ಭಾರಿ ಮಳೆಗೆ ರಸ್ತೆಗಳು, ಮನೆಗಳು ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

   

ಪುದುಚೇರಿ: ಫೆಂಗಲ್ ಚಂಡಮಾರುತದ ಅಬ್ಬರ ಜೋರಾಗಿದ್ದು, ಕೇಂದ್ರಾಡಳಿತ ಪ್ರದೆಶ ಪುದುಚೇರಿಯಲ್ಲಿ ಭಾರಿ ಮಳೆಯಾಗುತ್ತಿದೆ. ಶನಿವಾರ ರಾತ್ರಿಯಿಂದ ಚಂಡಮಾರುತ ಪುದುಚೇರಿಯನ್ನು ಹಾದುಹೋಗಿದ್ದು, ಭಾನುವಾರ ಬೆಳಗ್ಗೆ 9 ಗಂಟೆವರೆಗಿನ 24 ಗಂಟೆಗಳ ಅವಧಿಯಲ್ಲಿ ದಾಖಲೆಯ 46 ಸೆಂ.ಮೀ.ಮಳೆ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು, ದೈನಂದಿನ ಜನಜೀವನ ಅಸ್ತವ್ಯಸ್ತಗೊಂಡಿದೆ.

ADVERTISEMENT

ಹಲವು ಕಡೆಗಳಲ್ಲಿ ಮರಗಳು ರಸ್ತೆಗುರುಳಿದ್ದು, ಸಂಚಾರ ಸಹ ಸ್ಥಗಿತಗೊಂಡಿದೆ. ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಲವು ವಸತಿ ಸಮುಚ್ಛಯಗಳೂ ಜಲಾವೃತಗೊಂಡಿದ್ದು, ಜನ ಮನೆಬಿಟ್ಟು ಹೊರಬರಲು ಸಾಧ್ಯವಾಗದ ಪರಿಸ್ಥಿತಿ ಇದೆ. ತಗ್ಗು ಪ್ರದೇಶಗಳ ಮನೆಗಳು ಭಾಗಶಃ ಮುಳುಗಿವೆ.

ಎಲ್ಲ ಅಂಗಡಿ ಮುಂಗ್ಗಟ್ಟುಗಳನ್ನು ಮುಚ್ಚಲಾಗಿದ್ದು, ಸರ್ಕಾರ ಪರಿಹಾರ ಕೇಂದ್ರಗಳನ್ನು ತೆರೆಯಲು ಕಾರ್ಯೋನ್ಮುಖವಾಗಿದೆ.

ಹಲವೆಡೆ ಕೃಷಿ ಭೂಮಿಗಳಲ್ಲಿ ಕಟಾವಿಗೆ ಬಂದ ಬೆಳೆ ಜಲಾವೃತಗೊಂಡಿದೆ. ಪ್ರವಾಹದಲ್ಲಿ ಸಿಲುಕಿರುವ ಜನರ ನೆರವಿಗೆ ಸ್ಥಳೀಯ ಆಡಳಿತ, ಸೇನೆ ಮತ್ತು ಪೊಲೀಸರು ಧಾವಿಸಿದ್ದು, ಸ್ವಯಂ ಸೇವಕರು ಆಹಾರದ ಪೊಟ್ಟಣಗಳು, ಕುಡಿಯುವ ನೀರನ್ನು ವಿತರಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.