ADVERTISEMENT

ತೌತೆ ಚಂಡಮಾರುತ | ಅರಬ್ಬಿ ಸಮುದ್ರದಲ್ಲಿ ಸಿಲುಕಿದ ದೋಣಿ: 177 ಮಂದಿ ರಕ್ಷಣೆ

ಪಿಟಿಐ
Published 18 ಮೇ 2021, 10:43 IST
Last Updated 18 ಮೇ 2021, 10:43 IST
ಪಿ305 ದೋಣಿಯಲ್ಲಿ ಸಿಲುಕಿದ್ದ ಮೂವರನ್ನು ಹೆಲಿಕಾಫ್ಟರ್‌ ಮೂಲಕ ರಕ್ಷಿಸಿದ ಭಾರತೀಯ ನೌಕಾಪಡೆ                            –ಪಿಟಿಐ ಚಿತ್ರ
ಪಿ305 ದೋಣಿಯಲ್ಲಿ ಸಿಲುಕಿದ್ದ ಮೂವರನ್ನು ಹೆಲಿಕಾಫ್ಟರ್‌ ಮೂಲಕ ರಕ್ಷಿಸಿದ ಭಾರತೀಯ ನೌಕಾಪಡೆ                            –ಪಿಟಿಐ ಚಿತ್ರ   

ಮುಂಬೈ: ‘ತೌತೆ ಚಂಡಮಾರುತದಿಂದಾಗಿ ಅರಬ್ಬಿ ಸಮುದ್ರದಲ್ಲಿ ದೋಣಿಯೊಂದರಲ್ಲಿ ಸಿಲುಕಿದ್ದ 177 ಮಂದಿಯನ್ನು ಭಾರತೀಯ ನೌಕಾಪಡೆಯು ರಕ್ಷಿಸಿದೆ’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.

‘ನೈರುತ್ಯ ಮುಂಬೈನಿಂದ 70 ಕಿ.ಮೀ ದೂರದಲ್ಲಿರುವ ಹೀರಾ ಆಯಿಲ್‌ ಫೀಲ್ಡ್‌ನಲ್ಲಿ 273 ಸಿಬ್ಬಂದಿಯನ್ನೊಳಗೊಂಡ ಪಿ305 ದೋಣಿಯು ಸಿಲುಕಿತ್ತು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ನೌಕಾಪಡೆಗಳನ್ನು ನಿಯೋಜನೆ ಮಾಡಲಾಯಿತು’ ಎಂದು ಅವರು ಹೇಳಿದರು.

ಸೋಮವಾರ ರಾತ್ರಿ 11 ಗಂಟೆವರೆಗೆ 60 ಸಿಬ್ಬಂದಿಯನ್ನು ರಕ್ಷಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ಮೂವರನ್ನು ಹೆಲಿಕಾಪ್ಟರ್‌ ಮೂಲಕ ರಕ್ಷಿಸಿ, ಐಎನ್‌ಎಸ್‌ ಶಿಕಾರ್‌ಗೆ ಕರೆತರಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.