ADVERTISEMENT

ಅಂಡಮಾನ್‌ನತ್ತ ತಿರುಗಿದ ‘ಪಬುಕ್‌’ ಚಂಡಮಾರುತ

ಪಿಟಿಐ
Published 5 ಜನವರಿ 2019, 13:32 IST
Last Updated 5 ಜನವರಿ 2019, 13:32 IST
ಪಬುಕ್‌ ಚಂಡಮಾರುತದಿಂದ ಅಂಡಮಾನ್‌ ಸಮುದ್ರದಲ್ಲಿ ಭಾರೀ ಅಲೆಗಳು ದಡಕ್ಕೆ ಅಪ‍‍್ಪಳಿಸಿತು –ಪಿಟಿಐ ಚಿತ್ರ
ಪಬುಕ್‌ ಚಂಡಮಾರುತದಿಂದ ಅಂಡಮಾನ್‌ ಸಮುದ್ರದಲ್ಲಿ ಭಾರೀ ಅಲೆಗಳು ದಡಕ್ಕೆ ಅಪ‍‍್ಪಳಿಸಿತು –ಪಿಟಿಐ ಚಿತ್ರ   

ನವದೆಹಲಿ: ಅಂಡಮಾನ್‌ ನಿಕೋಬಾರ್‌ ದ್ವೀಪ ಸಮೂಹದತ್ತ ‘ಪಬುಕ್‌’ ಚಂಡಮಾರುತ ನುಗ್ಗಿದ್ದು, ಮುನ್ನೆಚ್ಚರಿಕೆಯಿಂದ (‘ಯಲ್ಲೋ ಅಲರ್ಟ್‌’) ಇರುವಂತೆ ಸೂಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಶನಿವಾರ ತಿಳಿಸಿದೆ.

ಅಂಡಮಾನ್‌ ದ್ವೀಪ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಗಂಟೆಗೆ 70 ರಿಂದ 80 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ.ಚಂಡ
ಮಾರುತದಿಂದ,ಅಂಡಮಾನ್‌ ದ್ವೀಪ ಸಮೂಹದ ಆಗ್ನೇಯ ಮತ್ತು ಪೂರ್ವ ಕೇಂದ್ರ ಭಾಗದಲ್ಲಿ ಹೊಂದಿಕೊಂಡಿರುವ ಸಮುದ್ರ ಮಟ್ಟ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೀನುಗಾರಿಕೆ ಬೇಡ: ಭಾರಿ ಪ್ರಮಾಣದ ಅಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುವ ಕಾರಣ ಅಂಡಮಾನ್‌ ಸಮುದ್ರದಲ್ಲಿ ಜನವರಿ 8ರವರೆಗೆ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.