ADVERTISEMENT

ಮುಂಬೈನಿಂದ ಹೊರಹಾಕಿದ್ದು ಪ್ರಜಾಪ್ರಭುತ್ವ ವಿರೋಧಿ ನಡೆ: ಡಿಕೆಶಿ ಅಸಮಾಧಾನ

ಏಜೆನ್ಸೀಸ್
Published 10 ಜುಲೈ 2019, 14:12 IST
Last Updated 10 ಜುಲೈ 2019, 14:12 IST
   

ಮುಂಬೈ: ಆದರೆ ನನ್ನನ್ನು ಮುಂಬೈನಿಂದ ಹೊರ ಹಾಕಲಾಗಿದೆ. ಏರ್‌ಪೋರ್ಟ್‌ಗೆ ಬಿಟ್ಟು ಬರಬೇಕು ಎಂದು ಪೊಲೀಸರಿಗೆ ಆದೇಶವಾಗಿದೆಯಂತೆ.ಮುಂಬೈ ಹಿಂದಿನಿಂದಲೂ ಒಂದೊಳ್ಳೆ ಸಂಸ್ಕೃತಿಯಲ್ಲಿ ನಡೆದುಕೊಂಡ ಬಂದ ನಗರ. ಆದರೆ, ಈಗ ನನ್ನನ್ನು ಹೊರ ಹಾಕಲಾಗುತ್ತಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಅಸಮಾಧಾನ ತೋಡಿಕೊಂಡರು.

ನಾನು ಶಾಸಕರನ್ನು ನೋಡಲೇಬೇಕು ಮಾತನಾಡಲೇಬೇಕು. ಹೋಟೆಲ್‌ ಪ್ರವೇಶಿಸಲು, ನನ್ನ ಸ್ನೇಹಿತರೊಂದಿಗೆ ಮಾತನಾಡಲು ನನಗೆ ಅವಕಾಶ ನೀಡಲಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಇಂದು ನಾನು ನಡೆಸಿದ ಹೋರಾಟದಲ್ಲಿ ಮುಂಬೈನ ಪಕ್ಷದ ನನ್ನ ಸ್ನೇಹಿತರು ನನ್ನ ಜತೆಗಿದ್ದರು. ಅವರಿಗೆ ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದರು.

ಹೋಟೆಲ್‌ ಪ್ರವೇಶ ಮಾಡಲು ನನಗೆ ಅವಕಾಶ ನೀಡಲಿಲ್ಲ. ಪೊಲೀಸರು ನನ್ನನ್ನು ಬಲವಂತದಿಂದ ಕರೆದೊಯ್ದರು. ರಾಜೀನಾಮೆ ನೀಡಿರುವ ಎಲ್ಲ ಶಾಸಕರೂ ಮರಳಿ ಬರುತ್ತಾರೆ ಎಂಬ ವಿಶ್ವಾಸ ನನಗೆ ಈಗಲೂ ಇದೆ. ಯಾರೂ ಪಕ್ಷ ಬಿಡುವುದಿಲ್ಲ. ನಮ್ಮ ಸರ್ಕಾರ ಸುರಕ್ಷಿತವಾಗಿದೆ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.