ADVERTISEMENT

ಹೆಪ್ಪುಗಟ್ಟಿದ ಕಾಶ್ಮೀರದ ದಾಲ್‌ ಸರೋವರ: 30 ವರ್ಷಗಳಲ್ಲೇ ಕಡಿಮೆ ತಾಪಮಾನ

30 ವರ್ಷಗಳಲ್ಲೇ ಅತಿ ಕಡಿಮೆ

ಪಿಟಿಐ
Published 14 ಜನವರಿ 2021, 10:31 IST
Last Updated 14 ಜನವರಿ 2021, 10:31 IST
ಪ್ರಾತಿನಿಧಿಕ ಚಿತ್ರ (ಪಿಟಿಐ)
ಪ್ರಾತಿನಿಧಿಕ ಚಿತ್ರ (ಪಿಟಿಐ)   

ಶ್ರೀನಗರ: ಶ್ರೀನಗರದಲ್ಲಿ ಗುರುವಾರ ಕನಿಷ್ಠ ತಾಪಮಾನವು ಮೈನಸ್‌ 8.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಇದು 30 ವರ್ಷಗಳಲ್ಲಿ ದಾಖಲಾದ ಅತಿ ಕನಿಷ್ಠ ಉಷ್ಣಾಂಶವಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದರು.

‘ಇಲ್ಲಿ ಶೀತ ಅಲೆಯ ಪರಿಸ್ಥಿತಿ ಸೃಷ್ಟಿಯಾಗಿದ್ದು, ಕಾಶ್ಮೀರದ ದಾಲ್‌ ಸರೋವರ ಮತ್ತು ಹಲವು ಜಲಮೂಲಗಳು ಹೆಪ್ಪುಗಟ್ಟಿವೆ’ ಎಂದು ಅಧಿಕಾರಿಗಳು ಹೇಳಿದರು.

1995ರಲ್ಲಿ ಶ್ರೀನಗರದ ಕನಿಷ್ಠ ತಾಪಮಾನವು ಮೈನಸ್‌ 8.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಅದೇ 1991 ರಲ್ಲಿ ಉಷ್ಣಾಂಶವು ಮೈನಸ್‌ 11.3 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. 1893 ರಲ್ಲಿ ಕನಿಷ್ಠ ತಾಪಮಾನವು ಮೈನಸ್‌ 14.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು.

ADVERTISEMENT

ಪ್ರವಾಸಿ ತಾಣ ಮತ್ತು ದಕ್ಷಿಣ ಕಾಶ್ಮೀರದ ವಾರ್ಷಿಕ ಅಮರನಾಥ ಯಾತ್ರೆಯ ಶಿಬಿರವಾದ ಪಹಲ್‌ಗಾಮ್‌ನಲ್ಲಿ ಗುರುವಾರ ತಾಪಮಾನವು ಮೈನಸ್ 11.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದಕ್ಕೂ ಮುಂದಿನ ದಿನ ಉಷ್ಣಾಂಶ ಮೈನಸ್‌ 11.7 ಡಿಗ್ರಿ ಸೆಲ್ಸಿಯಸ್‌ ಇತ್ತು.

ಗುರುವಾರ ಗುಲ್‌ಮಾರ್ಗ್‌ನಲ್ಲಿ ಮೈನಸ್‌ 7, ಕುಪ್ವಾರದಲ್ಲಿ ಮೈನಸ್‌ 6.7, ಕೊಕರ್ನಾಗ್‌ನಲ್ಲಿ ಮೈನಸ್ 10.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.