ADVERTISEMENT

ತಮಿಳುನಾಡು: ಶಾಲೆಗೆ ಹೋಗಲು ದಲಿತ ಮಕ್ಕಳಿಗೆ ದಾರಿ ನಿರ್ಬಂಧ; FIR ದಾಖಲು

ಏಜೆನ್ಸೀಸ್
Published 27 ಸೆಪ್ಟೆಂಬರ್ 2025, 11:08 IST
Last Updated 27 ಸೆಪ್ಟೆಂಬರ್ 2025, 11:08 IST
<div class="paragraphs"><p>ದಲಿತ ಮಕ್ಕಳು ಶಾಲೆಗೆ ಹೋಗಲು ದಾರಿ ನಿರ್ಬಂಧ</p></div>

ದಲಿತ ಮಕ್ಕಳು ಶಾಲೆಗೆ ಹೋಗಲು ದಾರಿ ನಿರ್ಬಂಧ

   

ತಂಜಾವೂರು: ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ದಾರಿ ಬಿಡದಿರುವ ಘಟನೆ ತಮಿಳುನಾಡಿನಿಂದ ವರದಿಯಾಗಿದೆ.

ತಂಜಾವೂರು ತಾಲ್ಲೂಕಿನ ಕೊಲ್ಲಂಗರೈ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ADVERTISEMENT

ಗ್ರಾಮದ ದಾರಿಯೊಂದರಲ್ಲಿ ದಲಿತ ವಿದ್ಯಾರ್ಥಿಗಳು ಶಾಲೆಗೆ ತೆರಳಲು ನಿರ್ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವೃದ್ಧೆ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. 

ಶಾಲಾ ಸಮವಸ್ತ್ರದಲ್ಲಿದ್ದ ಮಕ್ಕಳು ಇಲ್ಲಿನ ದಾರಿಯಲ್ಲಿ ಹಾದು ಹೋಗಲು ಮುಂದಾಗುತ್ತಾರೆ. ಆಗ ವೃದ್ಧೆಯೊಬ್ಬರು ಕೈಯಲ್ಲಿ ಕೋಲು ಹಿಡಿದು ಮಕ್ಕಳನ್ನು ತಡೆಯುತ್ತಾರೆ. ಆ ದಾರಿಯಲ್ಲಿ ಹಾದು ಹೋಗದಂತೆ ಕೂಗಾಡುತ್ತಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ದಾರಿಯನ್ನು ಬಳಸಲು ನಮಗೆ ಅವಕಾಶ ನೀಡುತ್ತಿಲ್ಲ. ಬದಲಿ ಮಾರ್ಗದಲ್ಲಿ ಹೋಗಲು ಒತ್ತಾಯಿಸುತ್ತಾರೆ. ಆ ಮಾರ್ಗದಲ್ಲಿ ಹೋದರೆ 1.5 ಕಿ.ಮೀ ಹೆಚ್ಚು ದೂರ ಕ್ರಮಿಸಬೇಕಾಗುತ್ತದೆ’ ಎಂದು ಗ್ರಾಮಸ್ಥರು ದೂರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.