ADVERTISEMENT

ದಾವೂದ್‌ ಸಹೋದರನಿಗೆ ಉಪಚಾರ: ಐವರ ಅಮಾನತು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2018, 17:34 IST
Last Updated 27 ಅಕ್ಟೋಬರ್ 2018, 17:34 IST
ಇಕ್ಬಾಲ್‌ ಕಸ್ಕರ್‌
ಇಕ್ಬಾಲ್‌ ಕಸ್ಕರ್‌   

ಠಾಣೆ: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹೋದರ ಇಕ್ಬಾಲ್‌ ಕಸ್ಕರ್‌ ನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ವಿಶೇಷ ಉಪ ಚಾರ ನೀಡಿದ ಆರೋಪದ ಮೇಲೆ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಇಲ್ಲಿನ ಖಾಸಗಿ ಸುದ್ದಿವಾಹಿನಿಯೊಂದು ಮಾಡಿದ ರಹಸ್ಯ ಕಾರ್ಯಾಚರಣೆಯಲ್ಲಿನ ದೃಶ್ಯಗಳನ್ನು ಆಧರಿಸಿ, ಜಂಟಿ ಪೊಲೀಸ್‌ ಆಯುಕ್ತ ಮಧುಕರ್‌ ಪಾಂಡೆ ಈ ಕ್ರಮ ಕೈಗೊಂಡಿದ್ದಾರೆ.

ಸುಲಿಗೆ ಮಾಡಿ ದ್ದಕ್ಕಾಗಿ ಶಿಕ್ಷೆಗೆ ಗುರಿಯಾಗಿರುವ ಇಕ್ಬಾಲ್‌ನನ್ನು ದಂತ ಮತ್ತು ಮಧುಮೇಹ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ನ್ಯಾಯಾ ಲಯ ಅನುಮತಿ ನೀಡಿತ್ತು. ಕಳೆದ ಗುರು ವಾರ ಆತ ಆಸ್ಪತ್ರೆಯಲ್ಲಿದ್ದ.

ADVERTISEMENT

ಈ ವೇಳೆ, ಅವನು ಆಸ್ಪತ್ರೆಯ ಪ್ರಾಂಗಣದಲ್ಲಿ ವಾಯುವಿಹಾರ ಮಾಡಿದ್ದಲ್ಲದೆ, ಸಂಬಂಧಿಕರನ್ನು ಭೇಟಿಯಾಗಿದ್ದ. ಅಲ್ಲದೆ, ಬಿರಿಯಾನಿ ಸೇವಿಸಿದ್ದ ಆತ, ಪೊಲೀಸರ ಎದುರೇ ಸಿಗರೇಟ್‌ ಸೇದಿದ್ದ ದೃಶ್ಯವೂ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ತನಗೆ ವಿಶೇಷ ಉಪಚಾರ ನೀಡಿದದವರಿಗೆ ಇಕ್ಬಾಲ್‌ ಹಣ ಹಂಚುತ್ತಿದ್ದುದನ್ನೂ ಕ್ಯಾಮೆರಾ ಕಣ್ಣು ಸೆರೆಹಿಡಿದಿತ್ತು.

ತಮಗೆ ಹೆದರಿಸಿ ಸುಲಿಗೆ ಮಾಡಿದ್ದಾನೆ ಎಂದು ಆರೋಪಿಸಿ ಮೂವರು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಇಕ್ಬಾಲ್‌ ವಿರುದ್ಧ ದೂರು ದಾಖಲಿಸಿದ್ದರು. ಇವನನ್ನು ಥಾಣೆ ಸೆಂಟ್ರಲ್‌ಜೈಲಿನಲ್ಲಿಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.