ADVERTISEMENT

ಡಿಡಿ ನ್ಯೂಸ್‌ನ ನಿರೂಪಕಿ ನೀಲಂ ಶರ್ಮಾ ನಿಧನ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 7:29 IST
Last Updated 18 ಆಗಸ್ಟ್ 2019, 7:29 IST
   

ನವದೆಹಲಿ: ದೂರದರ್ಶನ ಸುದ್ದಿ ವಾಹಿನಿಯಲ್ಲಿ 20 ವರ್ಷಗಳ ಕಾಲ ನಿರೂಪಕಿಯಾಗಿಕಾರ್ಯ ನಿರ್ವಹಿಸಿದ್ದ, ‘ನಾರಿ ಶಕ್ತಿ’ ಪ್ರಶಸ್ತಿ ಪುರಸ್ಕೃತ ನೀಲಂ ಶರ್ಮಾ (50) ಅವರು ಶನಿವಾರ ನಿಧನರಾಗಿದ್ದಾರೆ.

ಮಹಿಳಾ ಸಬಲೀಕರಣದ ಪ್ರಬಲ ಪ್ರತಿಪಾದಕರಾಗಿದ್ದ ನೀಲಂ ಶರ್ಮಾ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ನೀಲಂ ಶರ್ಮಾ ಅವರ ನಿಧನಕ್ಕೆ ಡಿಡಿ ನ್ಯೂಸ್‌ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದೆ. ‘ಡಿಡಿ ನ್ಯೂಸ್‌ನ ಸಂಸ್ಥಾಪಕ ನಿರೂಪಕಿಯಾಗಿದ್ದ ಅವರು ವಾಹಿನಿಯ ಮಹತ್ವದ ಸಂದರ್ಭಗಳಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ‘ಬಡೀ ಚರ್ಚಾ’ದಿಂದ ಆರಂಭಿಸಿ ಇತ್ತೀಚಿನ ‘ತೇಜಸ್ವಿನಿ’ ವರೆಗಿನ ಅವರ ಕಾರ್ಯಕ್ರಮಗಳು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರವಾಗಿವೆ. ‘ನಾರಿ ಶಕ್ತಿ’ ಪ್ರಶಸ್ತಿಯೂ ಅದರಲ್ಲೊಂದು,’ ಎಂದು ಡಿಡಿ ನ್ಯೂಸ್‌ ಹೇಳಿದೆ.

ADVERTISEMENT

ಶರ್ಮಾ ಅವರು 1995ರಲ್ಲಿ ದೂರದರ್ಶನ ವಾಹಿನಿ ಮೂಲಕ ತಮ್ಮ ವೃತ್ತಿ ಬದುಕು ಆರಂಭಿಸಿದ್ದರು. ಕಳೆದ ವರ್ಷವಷ್ಟೇ ಅವರಿಗೆ ರಾಷ್ಟ್ರಪತಿಗಳು ‘ನಾರಿ ಶಕ್ತಿ’ ಪ್ರಶಸ್ತಿ ನೀಡಿ ಗೌರವಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.