ADVERTISEMENT

ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿದ್ದ ವ್ಯಕ್ತಿಯ ತಲೆ ಪತ್ತೆ

ಪಿಟಿಐ
Published 16 ಅಕ್ಟೋಬರ್ 2020, 20:47 IST
Last Updated 16 ಅಕ್ಟೋಬರ್ 2020, 20:47 IST

ಬೆಟುಲ್:ದೆಹಲಿಯಿಂದ ಬಂದಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಂಜಿನ್‌ನಲ್ಲಿ ವ್ಯಕ್ತಿಯೊಬ್ಬರ ರುಂಡ ಪತ್ತೆಯಾಗಿದೆ.

‘ಮಧ್ಯಪ್ರದೇಶದ ಬೆತುಲ್ ನಿವಾಸಿರವಿ ಮಾರ್ಕಮ್ (28) ಎಂಬುವರ ರುಂಡವೆಂದು ಗೊತ್ತಾಗಿದೆ. ಸಂಬಂಧಿ
ಕರೂ ಅದನ್ನು ಗುರುತಿಸಿದ್ದಾರೆ’ ಎಂದು ನಗರದ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ರವಿ ಅವರು ದೆಹಲಿ–ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅದೇ ವೇಳೆ ರೈಲಿನಿಂದ ಬಿದ್ದಿದ್ದರು. ಅಕ್ಟೋಬರ್ 3ರಂದು ಬೆತುಲ್ ಬಳಿಯ ಹಳಿ ಮೇಲೆ ಮುಂಡ ಮಾತ್ರ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಅಲ್ಲಿಯ ರೈಲ್ವೆ ಪೊಲೀಸರು, ದೇಶದ ಎಲ್ಲ ಠಾಣೆಗಳಿಗೆ ಸಂದೇಶ ರವಾನಿಸಿದ್ದರು.’

ADVERTISEMENT

‘ಇತ್ತೀಚೆಗೆ ಬೆಂಗಳೂರಿಗೆ ಬಂದ ರೈಲಿನ ಎಂಜಿನ್‌ ಅನ್ನು ಸಿಬ್ಬಂದಿ ಪರಿಶೀಲಿಸಿದ್ದರು. ಅದೇ ವೇಳೆ ರುಂಡ ಕಂಡಿತ್ತು.ನಂತರವೇ ರುಂಡದ ಮಾಹಿತಿಯನ್ನು ಬೆತುಲ್ ಪೊಲೀಸರಿಗೆ ತಿಳಿಸಲಾಯಿತು. ಮುಂಡದ ಅಂತ್ಯಕ್ರಿಯೆ ಮುಗಿಸಿರುವ ಸಂಬಂಧಿಕರು, ರುಂಡಕ್ಕಾಗಿ ಬೆಂಗಳೂರಿಗೆ ಬರಲಿಲ್ಲ. ಹೀಗಾಗಿ, ಅವರ ಒಪ್ಪಿಗೆ ಪಡೆದು ನಾವೇ ರುಂಡದ ಅಂತಿಮ ಕ್ರಿಯಾವಿಧಿಗಳನ್ನು ನೆರವೇರಿಸಿದ್ದೇವೆ.

ರವಿ ಅವರದ್ದು ಆತ್ಮಹತ್ಯೆಯೋ ಅಥವಾಆಕಸ್ಮಿಕ ಸಾವೋ ಎಂಬುದು ಗೊತ್ತಾಗಿಲ್ಲ’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.