ADVERTISEMENT

ಬಿಹಾರ | ಹೈಪೊಗ್ಲೈಸೆಮಿಯಾದಿಂದ ಮಕ್ಕಳ ಸಾವಿನ ಸಂಖ್ಯೆ 73ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 14:15 IST
Last Updated 15 ಜೂನ್ 2019, 14:15 IST
ಆಸ್ಪತ್ರೆಯಲ್ಲಿ ವೈದ್ಯರಿಂದ ಮಕ್ಕಳಿಗೆ ಚಿಕಿತ್ಸೆ. ಚಿತ್ರ: ಎಎನ್‌ಐ ಟ್ವೀಟ್‌
ಆಸ್ಪತ್ರೆಯಲ್ಲಿ ವೈದ್ಯರಿಂದ ಮಕ್ಕಳಿಗೆ ಚಿಕಿತ್ಸೆ. ಚಿತ್ರ: ಎಎನ್‌ಐ ಟ್ವೀಟ್‌   

ಮುಜಾಫರ್‌ನಗರ್:ಬಿಹಾರದ ಮುಜಾಫರ್‌ನಗರದಲ್ಲಿ ಹೈಪೊಗ್ಲೈಸೆಮಿಯಾ ಬಾಧಿಸಿ ನಾಲ್ವರು ಮಕ್ಕಳು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಒಂದು ತಿಂಗಳಲ್ಲಿ ಇಲ್ಲಿಯವರೆಗೆ ಹೈಪೊಗ್ಲೈಸೆಮಿಯಾದಿಂದ ಸಾವಿಗೀಡಾದವರ ಸಂಖ್ಯೆ 73ಕ್ಕೇರಿದೆ.

ಆದಾಗ್ಯೂ, ಇದೊಂದು ಸಾಂಕ್ರಾಮಿಕ ರೋಗ ಅಲ್ಲ, ಹೈಪೊಗ್ಲೈಸೆಮಿಯಾದಿಂದ ಇವರು ಸಾವಿಗೀಡಾಗಿದ್ದಾರೆ ಎಂದು ರಾಜ್ಯದ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

ರಕ್ತದಲ್ಲಿ ಸಕ್ಕರೆ ಅಂಶ ತೀರಾ ಕಡಿಮೆಯಾದಾಗ ಅಥವಾ ದೇಹದಲ್ಲಿ ಸೋಡಿಯಂ ಅಥವಾ ಪೊಟಾಶಿಯಂ ಕೊರತೆಯುಂಟಾಗುವ ಸ್ಥಿತಿಯೇ ಹೈಪೊಗ್ಲೈಸೆಮಿಯಾ.

ADVERTISEMENT

ಮುಜಾಫರ್‌ನಗರದ ಜಿಲ್ಲಾಡಳಿತದ ಪ್ರಕಟಣೆ ಪ್ರಕಾರ ಇಬ್ಬರು ಜೂನ್ 1ರಿಂದ ಇಲ್ಲಿಯವರೆಗೆ ಅಕ್ಯೂಟ್ ಎನ್ಸೆಫಾಲಿಟೆಸ್ ಸಿಂಡ್ರೊಮ್ (ಎಇಎಸ್) ಬಾಧಿತ 117ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಶ್ರೀ ಕೃಷ್ಣ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 58 ಮಕ್ಕಳು ಮೃತಪಟ್ಟಿದ್ದಾರೆ.

ಖಾಸಗಿ ಕೇಜ್ರಿವಾಲ್ ಆಸ್ಪತ್ರೆಯಲ್ಲಿ 55ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ 11 ಮಂದಿ ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.