ADVERTISEMENT

ಬಂಗಾಳಿ ಭಾಷೆಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿ ಎಂದರು ಅಮಿತ್ ಶಾ: ದೇಬೊ ಶ್ರೀ

​ಪ್ರಜಾವಾಣಿ ವಾರ್ತೆ
Published 30 ಮೇ 2019, 13:34 IST
Last Updated 30 ಮೇ 2019, 13:34 IST
   

ನವದೆಹಲಿ:ಬಂಗಾಳದ ರಾಯ್‌ಗಂಜ್ ಸಂಸದೆಗೆ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸ್ಥಾನ ಲಭಿಸಿದೆ. ಪಶ್ಚಿಮ ಬಂಗಾಳದ ಬಿಜೆಪಿ ಕಾರ್ಯದರ್ಶಿಯಾಗಿರುವ48ರ ಹರೆಯದದೇಬೊಶ್ರೀ ಚೌಧರಿ ಅವರಿಗೆ ಗುರುವಾರ ಬೆಳಗ್ಗೆ ಅಮಿತ್ ಶಾ ಅವರಿಂದ ಕರೆ ಬಂದಿದೆ.

ತಮ್ಮನ್ನು ಸಚಿವ ಸಂಪುಟಕ್ಕೆ ಸೇರಿಸಲಿದ್ದೇವೆ ಎಂದು ಅಮಿತ್ ಶಾ ಹೇಳಿದ್ದರು ಅಂತಾರೆ ದೇಬೊಶ್ರೀ.

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಯ್‌ಗಂಜ್‌ನಲ್ಲಿ ಮಾತನಾಡಿದ್ದಅಮಿತ್ ಶಾ, ದೇಬೊಶ್ರೀ ಚುನಾವಣೆಯಲ್ಲಿ ಗೆದ್ದರೆ ಆಕೆಯನ್ನು ಸಚಿವೆ ಮಾಡುತ್ತೇವೆ ಎಂದಿದ್ದರು.ಅಮಿತ್ ಶಾ ಅವರು ಕೊಟ್ಟ ಮಾತು ನೆರವೇರಿಸಿದ್ದು,ಬಂಗಾಳಿ ಭಾಷೆಯಲ್ಲಿಯೇ ಪ್ರಮಾಣ ವಚನ ಸ್ವೀಕರಿಸುವಂತೆ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮದವರೊಂದಿಗೆ ಮಾತನಾಡಿದ ದೇಬೊಶ್ರೀ ಹೇಳಿದ್ದಾರೆ.

ADVERTISEMENT

ಬಂಗಾಳದಿಂದ ಇಬ್ಬರು ಸಂಸದರು ಮೋದಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಈ ಹಿಂದೆ ಹೆವಿ ಇಂಡಸ್ಟ್ರೀಸ್ ಆ್ಯಂಡ್ ಪಬ್ಲಿಕ್ ಎಂಟರ್‌ಪ್ರೈಸೆಸ್ ಖಾತೆ ವಹಿಸಿದ್ದ ಬಾಬುಲ್ ಸುಪ್ರಿಯೊ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.