ADVERTISEMENT

ಅರುಣಾಚಲ ಪ್ರದೇಶ ಗಡಿಯ ಮುಂಚೂಣಿ ನೆಲೆಗಳಿಗೆ ರಾಜನಾಥ್ ಸಿಂಗ್: ಯೋಧರ ಜತೆ ಮಾತುಕತೆ

ಪಿಟಿಐ
Published 30 ಸೆಪ್ಟೆಂಬರ್ 2022, 2:47 IST
Last Updated 30 ಸೆಪ್ಟೆಂಬರ್ 2022, 2:47 IST
ಅರುಣಾಚಲ ಪ್ರದೇಶ ಗಡಿಯ ಮುಂಚೂಣಿ ನೆಲೆಗಳಿಗೆ ರಾಜನಾಥ್ ಸಿಂಗ್ ಭೇಟಿ: ಯೋಧರ ಜತೆ ಮಾತುಕತೆ – ಪಿಟಿಐ ಚಿತ್ರ
ಅರುಣಾಚಲ ಪ್ರದೇಶ ಗಡಿಯ ಮುಂಚೂಣಿ ನೆಲೆಗಳಿಗೆ ರಾಜನಾಥ್ ಸಿಂಗ್ ಭೇಟಿ: ಯೋಧರ ಜತೆ ಮಾತುಕತೆ – ಪಿಟಿಐ ಚಿತ್ರ   

ಇಟಾನಗರ: ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರು ಗುರುವಾರ ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆ ಜಿಲ್ಲೆಯ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಮುಂಚೂಣಿ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಯೋಧರ ಜತೆ ಮಾತುಕತೆ ನಡೆಸಿದ್ದಾರೆ.

ಎಲ್‌ಎಸಿಯಲ್ಲಿ ಸೇನೆಯ ಸನ್ನದ್ಧತೆಯ ಪರಿಶೀಲನೆ ನಡೆಸಿದ ಅವರು, ಭದ್ರತೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಪಡೆದುಕೊಂಡರು ಎಂದು ಸೇನೆಯ ಪ್ರಕಟಣೆ ತಿಳಿಸಿದೆ.

ಸಿಂಗ್ ಜತೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಜಿಒಸಿ–ಇನ್–ಸಿ, ಪೂರ್ವ ಕಮಾಂಡ್ ಲೆಫ್ಟಿನೆಂಟ್ ಜನರಲ್ ಆರ್‌.ಪಿ. ಕಲಿತಾ ಹಾಗೂ ಸೇನೆಯ ಇತರ ಉನ್ನತ ಅಧಿಕಾರಿಗಳಿದ್ದರು ಎಂದು ತೇಜ್‌ಪುರ್ ವ್ಯಾಪ್ತಿಯ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಎ.ಎಸ್. ವಾಲಿಯಾ ತಿಳಿಸಿದ್ದಾರೆ.

ADVERTISEMENT

ಗಡಿ ಪ್ರದೇಶಗಳಲ್ಲಿ ಚೀನಾ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುತ್ತಿರುವ ಸಂದರ್ಭದಲ್ಲೇ ರಾಜನಾಥ್ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿದ್ದಾರೆ.

‘ಭಾರತ–ಚೀನಾ ನಡುವಣ ಬಿಕ್ಕಟ್ಟು ನಿಧಾನವಾಗಿ ಶಮನಗೊಳ್ಳುತ್ತಿದ್ದು, ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿಯ ಒಟ್ಟಾರೆ ಪರಿಸ್ಥಿತಿ ಸ್ಥಿರವಾಗಿದೆ’ ಎಂದು ಭಾರತದಲ್ಲಿರುವ ಚೀನಾದ ರಾಯಭಾರಿ ಸನ್‌ ವೀಡೊಂಗ್‌ ಗುರುವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.