
ನವದೆಹಲಿ: ಆರು ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್‌ಎಚ್) ಹಾಗೂ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳ ಖರೀದಿ ಸಂಬಂಧ ₹5,083 ಕೋಟಿ ಮೊತ್ತದ ಒಪ್ಪಂದಕ್ಕೆ ರಕ್ಷಣಾ ಇಲಾಖೆಯು ಮಂಗಳವಾರ ಎಚ್‌ಎಎಲ್‌ನೊಂದಿಗೆ ಸಹಿ ಹಾಕಿದೆ.
ಎಎಲ್‌ಎಚ್ ಎಂಕೆ–2 ಹೆಲಿಕಾಪ್ಟರ್‌ಗಳನ್ನು ಭಾರತೀಯ ತಟರಕ್ಷಕ ಪಡೆಗೆ ನಿಯೋಜಿಸಲು ಖರೀದಿ ಪ್ರಕ್ರಿಯೆ ನಡೆದಿದ್ದು, ‘ಶಿಟಿಲ್’ ಕ್ಷಿಪಣಿಗಳನ್ನು ಭಾರತೀಯ ಯುದ್ಧ ನೌಕೆಗಳಲ್ಲಿ ನಿಯೋಜಿಸಲಾಗುತ್ತದೆ.
‘ಕಾರ್ಯಾಚರಣಾ ಉಪಕರಣಗಳು, ಎಂಜಿನಿಯರಿಂಗ್ ಬೆಂಬಲ ಪ್ಯಾಕೇಜ್ ಹಾಗೂ ಸಾಗಣೆ ನೆರವಿನ ಉದ್ದೇಶದೊಂದಿಗೆ ಎಎಲ್‌ಎಚ್ ಎಂಕೆ–2 ಹೆಲಿಕಾಪ್ಟರ್‌ಗಳ ಖರೀದಿಗೆ ₹2901 ಕೋಟಿ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿದೆ. ಎರಡು ಎಂಜಿನ್‌ಗಳನ್ನು ಹೊಂದಿರುವ ವಿಮಾನವು ಕಡಲಿನ ಭದ್ರತೆ ಒದಗಿಸುತ್ತಿರುವ ಹೆಲಿಕಾಪ್ಟರ್‌ಗಳಲ್ಲಿಯೇ ಅತ್ಯುನ್ನತ ಮಟ್ಟದಾಗಿದೆ. ಈ ಕಾಪ್ಟರ್‌ಗಳ ಸೇರ್ಪಡೆಯಿಂದ ಭಾರತೀಯ ಕಡಲ ರಕ್ಷಣೆಗೆ ಮತ್ತಷ್ಟು ಬಲ ತುಂಬಲಿದೆ. ಅದೇ ರೀತಿ, ಕ್ಷಿಪಣಿಗಳ ಸೇರ್ಪಡೆಯಿಂದ ವಾಯುರಕ್ಷಣೆಯಲ್ಲಿ ಮತ್ತಷ್ಟು ಸದೃಢವಾಗಲಿದೆ’ ಎಂದು ರಕ್ಷಣಾ ಇಲಾಖೆಯು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.