ADVERTISEMENT

ಬೆಂಗಳೂರಲ್ಲಿ ನಿರ್ಮಾಣವಾಗಲಿದೆ ರಕ್ಷಣಾ ಬಾಹ್ಯಾಕಾಶ ಸಂಸ್ಥೆ?

ಏಜೆನ್ಸೀಸ್
Published 15 ಮೇ 2019, 15:08 IST
Last Updated 15 ಮೇ 2019, 15:08 IST
ಎಸ್‌.ಪಿ. ಧಾರ್ಕರ್‌
ಎಸ್‌.ಪಿ. ಧಾರ್ಕರ್‌   

ನವದೆಹಲಿ:ಉಪಗ್ರಹ ನಿಗ್ರಹ ಕ್ಷಿಪಣಿಯ ಯಶಸ್ವಿ ಪ್ರಯೋಗದ ಕೇಂದ್ರ ಸರ್ಕಾರ ರಕ್ಷಣಾ ಉದ್ದೇಶಕ್ಕಾಗಿ ಪ್ರತ್ಯೇಕ ಬಾಹ್ಯಾಕಾಶ ಸಂಸ್ಥೆಯೊಂದನ್ನು ಸ್ಥಾಪಿಸಲು ಉದ್ದೇಶಿಸಿದೆ.

ಬೆಂಗಳೂರಿನಲ್ಲಿ ಇದರ ಕೇಂದ್ರ ಕಚೇರಿ ನಿರ್ಮಾಣವಾಗಲಿದ್ದು,ಯುದ್ಧ ವಿಮಾನ ಚಾಲಕ ಏರ್‌ ವೈಸ್‌ ಮಾರ್ಷಲ್ ಎಸ್‌.ಪಿ. ಧಾರ್ಕರ್‌ ಇದರ ಮುಖ್ಯಸ್ಥರಾಗಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಧಾರ್ಕರ್ ಅವರು ಸದ್ಯ ಗಡಿಭಾಗದಲ್ಲಿನ ರಕ್ಷಣ ಕಾರ್ಯಾಚಾರಣೆಗಳ ಹೊಣೆ ಹೊತ್ತಿದ್ದಾರೆ.

ಉಪಗ್ರಹ ನಿಗ್ರಹ ಕ್ಷಿಪಣಿ ‘ಎ–ಸ್ಯಾಟ್’ (A-SAT) ಸೇರಿದಂತೆ ಮೂರು ಸೇವೆಗಳನ್ನು ನಿರ್ವಹಿಸುವ ಸೇನಾ ಉದ್ದೇಶಕ್ಕಾಗಿ ನಿರ್ಮಿಸುತ್ತಿರುವ ಈ ಬಾಹ್ಯಾಕಾಶ ಸಂಸ್ಥೆ ಮುಂದಿನ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ. ಸಾಮರ್ಥ್ಯ ಹಾಗೂ ಸ್ಥಳದ ಕುರಿತಾಗಿ ಇನ್ನೂ ಅಂತಿನ ತೀರ್ಮಾನ ಕೈಗೊಂಡಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.