ADVERTISEMENT

ದೆಹಲಿ ಪಾಲಿಕೆಯಲ್ಲಿ ಗದ್ದಲ: ಕುಸಿದು ಬಿದ್ದ ಎಎಪಿ ಕೌನ್ಸಿಲರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಫೆಬ್ರುವರಿ 2023, 16:03 IST
Last Updated 24 ಫೆಬ್ರುವರಿ 2023, 16:03 IST
   

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ ಸಭೆಯಲ್ಲಿ ಎಎಪಿ ಮತ್ತು ಬಿಜೆಪಿ ಶಾಸಕರ ನಡುವೆ ಗದ್ದಲ ಏರ್ಪಟ್ಟಿದ್ದು, ಸದಸ್ಯರೊಬ್ಬರು ಕುಸಿದುಬಿದ್ದ ಘಟನೆ ನಡೆದಿದೆ.

ಎಎಪಿ ಮತ್ತು ಬಿಜೆಪಿ ಕೌನ್ಸಿಲರ್‌ಗಳ ನಡುವಿನ ಘರ್ಷಣೆಯಿಂದ ಉಂಟಾದ ಸುದೀರ್ಘ ಕೋಲಾಹಲದ ನಂತರ ನಿನ್ನೆಯೂ ಸಭೆ ಮುಂದೂಡಲ್ಪಟ್ಟಿತ್ತು. ಇಂದು ಪಾಲಿಕೆಯ ಸ್ಥಾಯಿ ಸಮಿತಿಯ ಸದಸ್ಯರ ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಈ ನಡುವೆ ಗದ್ದಲ ಏರ್ಪಟ್ಟಿತ್ತು. ಮಾತಿನ ಸಮರ, ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು.

ಸದಸ್ಯರು ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಗಲಾಟೆ ಸಂದರ್ಭ ಕುಸಿದು ಬಿದ್ದ ಎಎಪಿ ಕೌನ್ಸಿಲರ್ ಅಶೋಕ್ ಕುಮಾರ್ ಮಾನು ಇತರ ಸದಸ್ಯರ ಜೊತೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡರು.

‘ಅವರು ನಾಚಿಕೆಗೆಟ್ಟವರು. ಮಹಿಳೆಯರು, ಮೇಯರ್ ಮೇಲೂ ದಾಳಿ ಮಾಡಿದ್ದಾರೆ. ಬಿಜೆಪಿ ಗೂಂಡಾಗಳು ಇದನ್ನು ಮಾಡಿದ್ದಾರೆ’ಎಂದು ಎಂದು ಎಎಪಿ ಕೌನ್ಸಿಲರ್‌ಗಳು ಆರೋಪಿಸಿದ್ದಾರೆ.

ADVERTISEMENT

ಘಟನೆಯನ್ನು ಖಂಡಿಸಿರುವ ಎಎಪಿ ಶಾಸಕಿ ಅತಿಶಿ, ದೇಶದ ಜನ ಇದನ್ನು ಗಮನಿಸುತ್ತಿದ್ದಾರೆ. ಮೇಯರ್ ಶೆಲ್ಲಿ ಒಬೆರಾಯ್ ಅವರ ಮೇಲೆ ದಾಳಿ ಮಾಡಿದವರನ್ನು ಕಂಬಿ ಹಿಂದೆ ಕಳುಹಿಸುವುದಾಗಿ ಅವರು ಹೇಳಿದ್ದಾರೆ.

ಇದೆಂತಹ ನಡವಳಿಕೆ. ನಾಚಿಕೆಗೇಡು ಮತ್ತು ಖಂಡನಾರ್ಹ. ಬಿಜೆಪಿ ಅವರ ಸೋಲನ್ನು ಒಪ್ಪಿಕೊಳ್ಳಬೇಕು. ತಮ್ಮ ಗೂMಡಾ ವರ್ತನೆ ನಿಲ್ಲಿಸುವಂತೆ ಬಿಜೆಪಿಗೆ ಮನವಿ ಮಾಡುತ್ತೇನೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.