ADVERTISEMENT

₹571 ಕೋಟಿ ಸಿಸಿಟಿವಿ ಯೋಜನೆ ಹಗರಣ: ಸತ್ಯೇಂದ್ರ ಜೈನ್ ವಿರುದ್ಧ ಎಸಿಬಿ ಪ್ರಕರಣ

ಪಿಟಿಐ
Published 19 ಮಾರ್ಚ್ 2025, 9:30 IST
Last Updated 19 ಮಾರ್ಚ್ 2025, 9:30 IST
ಸತ್ಯೇಂದ್ರ ಜೈನ್
ಸತ್ಯೇಂದ್ರ ಜೈನ್   

ನವದೆಹಲಿ: ₹571 ಕೋಟಿ ಮೊತ್ತದ ಸಿಸಿಟಿವಿ ಯೋಜನೆಯ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಲೋಕೋಪಯೋಗಿ ಸಚಿವ ಮತ್ತು ಎಎಪಿಯ ಹಿರಿಯ ನಾಯಕ ಸತ್ಯೇಂದ್ರ ಜೈನ್ ವಿರುದ್ಧ ದೆಹಲಿ ಭ್ರಷ್ಟಾಚಾರ ನಿಗ್ರಹ ದಳವು(ಎಸಿಬಿ) ಪ್ರಕರಣ ದಾಖಲಿಸಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.

ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದ ನಂತರ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಎಸಿಬಿ) ಮಧುರ್ ವರ್ಮಾ ತಿಳಿಸಿದ್ದಾರೆ.

‘ದೆಹಲಿಯಾದ್ಯಂತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಮೇಲೆ ವಿಧಿಸಲಾದ ₹16 ಕೋಟಿ ಮೌಲ್ಯದ ದಿವಾಳಿ ಪರಿಹಾರವನ್ನು ಜೈನ್ ಅನಿಯಂತ್ರಿತವಾಗಿ ಮನ್ನಾ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ₹7 ಕೋಟಿ ಲಂಚ ಪಡೆದ ನಂತರ ಈ ಮನ್ನಾ ಮಾಡಲಾಗಿದೆ ಎಂದು ಆರೋಪಿಸಲಾಗಿದೆ’ಎಂದು ವರ್ಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಯೋಜನೆಯು ಕಳಪೆಯಾಗಿದೆ ಎಂದು ಹಲವು ದೂರುಗಳು ಬಂದಿವೆ. ಹಸ್ತಾಂತರದ ಸಮಯದಲ್ಲಿ ಹಲವು ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.