
ದೆಹಲಿ ವಾಯು ಮಾಲಿನ್ಯ
ದೆಹಲಿ ವಾಯು ಮಾಲಿನ್ಯ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ಬೆಳಿಗ್ಗೆ ಗಾಳಿಯ ಗುಣಮಟ್ಟ ‘ತೀವ್ರ ಕಳಪೆ’ ಮಟ್ಟದಲ್ಲೇ ಮುಂದುವರಿದಿದೆ. ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 381 ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ.
ಸಿಪಿಸಿಬಿಯ ‘ಸಮೀರ್’ ಆ್ಯಪ್ ಮಾಹಿತಿಯ ಪ್ರಕಾರ, ದೆಹಲಿಯ 13 ಮೇಲ್ವಿಚಾರಣಾ ಕೇಂದ್ರಗಳು ಗಾಳಿಯ ಗುಣಮಟ್ಟವನ್ನು ‘ತೀವ್ರ ಕಳಪೆ’ ಮಟ್ಟದಲ್ಲಿ ದಾಖಲಾಗಿದೆ. 25 ಕೇಂದ್ರಗಳಲ್ಲಿ 300ಕ್ಕೂ ಅಧಿಕ ಎಕ್ಯೂಐ ದಾಖಲಾಗಿದೆ.
ಸಿಪಿಸಿಬಿ ಮಾನದಂಡಗಳ ಪ್ರಕಾರ 0 ಮತ್ತು 50 ರ ನಡುವಿನ ವಾಯು ಗುಣಮಟ್ಟವನ್ನು ‘ಉತ್ತಮ’ 51 ರಿಂದ 100 ‘ತೃಪ್ತಿದಾಯಕ’, 101 ರಿಂದ 200 ‘ಮಧ್ಯಮ’, 201 ರಿಂದ 300 ‘ಕಳಪೆ’, 301 ರಿಂದ 400 ‘ತುಂಬಾ ಕಳಪೆ’ ಮತ್ತು 401 ರಿಂದ 500 ‘ತೀವ್ರ’ ಎಂದು ಪರಿಗಣಿಸಲಾಗುತ್ತದೆ.
ಕನಿಷ್ಠ ತಾಪಮಾನವು 14 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಇದು ಋತುವಿನ ಸರಾಸರಿಗಿಂತ 2.7 ಡಿಗ್ರಿ ಹೆಚ್ಚು. ಗರಿಷ್ಠ ತಾಪಮಾನವು ಸುಮಾರು 26 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.