
ರಾಷ್ಟ್ರಪತಿ ಭವನದ ಬಳಿ ದಟ್ಟ ಹೊಗೆ ಆವರಿಸಿರುವುದು
ಪಿಟಿಐ ಚಿತ್ರ
ನವದೆಹಲಿ: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅತಿ ಕಳಪೆ ಮಟ್ಟಕ್ಕೆ ಕುಸಿದಿದೆ. ಭಾನುವಾರ ಎಕ್ಯೂಐ ಸೂಚ್ಯಂಕ 391 ತಲುಪಿದೆ.
ತಾಪಮಾನ 11.7 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ದಟ್ಟ ಹೊಗೆ ತುಂಬಿದ ವಾತಾವರಣ ಕಂಡುಬಂದಿದೆ.
ಭಾನುವಾರ ಸಂಜೆ 4 ಗಂಟೆಯ ಹೊತ್ತಿಗೆ ಎಕ್ಯೂಐ ಸೂಚ್ಯಂಕ 370ಕ್ಕೆ ತಲುಪಿದ್ದು, ನಗರವನ್ನು ರೆಡ್ ಝೋನ್‌ನಲ್ಲಿ ಇರಿಸಲಾಗಿದೆ. ಮುಂದಿನ ಕೆಲವು ದಿನಗಳವರೆಗೆ ದೆಹಲಿಯಾದ್ಯಂತ ಗಾಳಿಯ ಗುಣಮಟ್ಟ ಕಳಪೆಯಾಗಿಯೇ ಇರಲಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಕುಸಿಯಲು ಕೃಷಿ ತ್ಯಾಜ್ಯಗಳನ್ನು ಸುಡುವುದು ಶೇ 5ರಷ್ಟು ಕಾರಣವಾದರೆ, ಅತಿಯಾದ ವಾಹನ ಸಂಚಾರ ಶೇ 20ರಷ್ಟು ಕಾರಣವಾಗಿದೆ. ಸ್ಯಾಟಲೈಟ್ ಅಂಕಿಅಂಶಗಳ ಪ್ರಕಾರ, ಈವರೆಗೆ ಪಂಜಾಬ್‌ನಲ್ಲಿ 238 ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕಿದ ಪ್ರಕರಣ, ಹರಿಯಾಣದಲ್ಲಿ 42, ಮತ್ತು ಉತ್ತರ ಪ್ರದೇಶದಲ್ಲಿ 158 ಪ್ರಕರಣ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.