ADVERTISEMENT

ವಿಶ್ವಾಸಮತ ಸಾಬೀತು ಪಡಿಸಿ ಆಪರೇಷನ್‌ ಕಮಲಕ್ಕೆ ಸಡ್ಡು ಹೊಡೆದ ಕೇಜ್ರಿವಾಲ್‌

ಪಿಟಿಐ
Published 1 ಸೆಪ್ಟೆಂಬರ್ 2022, 9:33 IST
Last Updated 1 ಸೆಪ್ಟೆಂಬರ್ 2022, 9:33 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿಧಾನಸಭೆಯಲ್ಲಿ ವಿಶ್ವಾಸಮತ ಗೊತ್ತುವಳಿ ಮಂಡಿಸಿದರು | ಪಿಟಿಐ ಚಿತ್ರ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿಧಾನಸಭೆಯಲ್ಲಿ ವಿಶ್ವಾಸಮತ ಗೊತ್ತುವಳಿ ಮಂಡಿಸಿದರು | ಪಿಟಿಐ ಚಿತ್ರ   

ನವದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ದೆಹಲಿ ವಿಧಾನಸಭೆಯಲ್ಲಿ ಗುರುವಾರ ವಿಶ್ವಾಸಮತ ಸಾಬೀತು ಪಡಿಸಿದ್ದಾರೆ. ಎಎಪಿಯ ಯಾವೊಬ್ಬ ಶಾಸಕನೂ ಪಕ್ಷದಿಂದ ದೂರ ಹೋಗಿಲ್ಲ ಎಂಬುದನ್ನು ದೃಢಪಡಿಸುವ ಉದ್ದೇಶದಿಂದ ಈ ಗೊತ್ತುವಳಿಯನ್ನು ಮಂಡಿಸಲಾಗಿತ್ತು.

ಈ ಮೂಲಕ ಬಿಜೆಪಿಯ 'ಆಪರೇಷನ್‌ ಕಮಲ' ಯತ್ನವನ್ನು ವಿಫಲಗೊಳಿಸಿದ ಸಂದೇಶವನ್ನು ಕೇಜ್ರಿವಾಲ್‌ ನೀಡಿದ್ದಾರೆ. ಧ್ವನಿ ಮತದ ಮೂಲಕ ವಿಶ್ವಾಸಮತ ಪ್ರಕ್ರಿಯೆ ನಡೆಯಿತು.

ಈ ಸಂದರ್ಭ ಹಾಜರಿದ್ದ ಆಮ್‌ ಆದ್ಮಿ ಪಾರ್ಟಿ (ಎಎಪಿ)ಯ ಎಲ್ಲ ಶಾಸಕರು ಗೊತ್ತುವಳಿ ಪರ ಮತ ಚಲಾಯಿಸಿದರು. ಗೊತ್ತುವಳಿ ವಿರುದ್ಧ ಯಾರೂ ಮತ ಚಲಾಯಿಸಿಲ್ಲ. ಉಪಸಭಾಪತಿ ರಾಖಿ ಬಿರ್ಲಾ ಜೊತೆಗೆ ವಾಗ್ವಾದ ನಡೆಸಿದ ಕಾರಣಕ್ಕೆ ಬಿಜೆಪಿ ಶಾಸಕರಾದ ವಿಜೇಂದರ್‌ ಗುಪ್ತ, ಅಭಯ್‌ ವರ್ಮ ಮತ್ತು ಮೋಹನ್‌ ಸಿಂಗ್‌ ಬಿಶ್ಠ್ ಅವರನ್ನು ಹೊರಗೆ ಕಳುಹಿಸಲಾಯಿತು. ಉಳಿದ ಶಾಸಕರು ಪ್ರತಿಭಟಿಸಿ ಸಭೆಯಿಂದ ಹೊರನಡೆದರು.

ADVERTISEMENT

ಇದೇ ವೇಳೆ ಅರವಿಂದ ಕೇಜ್ರಿವಾಲ್‌ ಅವರು ಬಿಜೆಪಿಗೆ ಪರ್ಯಾಯ ಪಕ್ಷ ಎಎಪಿ ಎಂಬ ಸಂದೇಶವನ್ನು ಪರೋಕ್ಷವಾಗಿ ನೀಡಿದರು. ರಾಷ್ಟ್ರ ಮಟ್ಟದಲ್ಲಿ ಈಗಿರುವುದು ಎರಡೇ ಪಕ್ಷಗಳು. ಒಂದು ಖಟ್ಟರ್‌ ಇಮಾನ್ದಾರ್‌ (ಅತ್ಯಂತ ನಿಷ್ಠರು) ಹಾಗೂ ಮತ್ತೊಂದು ಖಟ್ಟರ್‌ ಬೇಯ್ಮಾನ್‌ (ಅತ್ಯಂತ ಭ್ರಷ್ಟರು) ಪಕ್ಷ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.