ADVERTISEMENT

ತುರ್ತು ಪರಿಸ್ಥಿತಿಗೆ 50 ವರ್ಷ: ದೆಹಲಿಯಲ್ಲಿ ವಿಚಾರ ಸಂಕಿರಣ

ಪಿಟಿಐ
Published 27 ಜೂನ್ 2025, 15:42 IST
Last Updated 27 ಜೂನ್ 2025, 15:42 IST
   

ನವದೆಹಲಿ: ತುರ್ತು ಪರಿಸ್ಥಿತಿ ಜಾರಿಯಾಗಿ 50 ವರ್ಷವಾಗಿರುವ ಪ್ರಯುಕ್ತ ದೆಹಲಿ ವಿಧಾನಸಭೆಯು ವಿಶೇಷ ವಿಚಾರ ಸಂಕಿರಣ ಆಯೋಜಿಸಿದೆ. ವಿಧಾನಸಭೆಯ ಆವರಣದಲ್ಲಿ ಶನಿವಾರ ಈ ಕಾರ್ಯಕ್ರಮ ನಡೆಯಲಿದೆ ಎಂದು ದೆಹಲಿ ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ‌ಹೇಳಿದ್ದಾರೆ. 

ಸಂವಿಧಾನ ಹತ್ಯಾ ದಿವಸ ಎಂಬ ವಿಚಾರದ ಅನ್ವಯ ‘ ಭಾರತೀಯ ಲೋಕತಂತ್ರ ಹಾಗೂ ಸಂವಿಧಾನದ ಅತ್ಯಂತ ಅಂಧಕಾರದ ಅವಧಿ: ಮರೆಯುವುದೂ ಇಲ್ಲ, ಕ್ಷಮಿಸುವುದೂ ಇಲ್ಲ’ ಎಂಬ ಶೀರ್ಷಿಕಯ ಅಡಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್‌, ಕೇಂದ್ರದ ಮಾಜಿ ಸಚಿವ ಸತ್ಯನಾರಾಯಣ ಜತಿಯಾ ಸೇರಿದಂತೆ ಹಲವು ಗಣ್ಯರು ವಿಚಾರ ಸಂಕಿರಣದಲ್ಲಿ ಭಾಗಿಯಾಗಲಿದ್ದಾರೆ.

ADVERTISEMENT

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ಕರಾಳ ಎಂದು ಪರಿಗಣಿಸುವ ಅವಧಿಯ ಕುರಿತು ರಾಷ್ಟ್ರೀಯ ಆತ್ಮಾವಲೋಕನಕ್ಕೆ ಈ ಕಾರ್ಯಕ್ರಮ ಅನುವಾಗಲಿದೆ. ತುರ್ತು ಪರಿಸ್ಥಿತಿಗೆ ಪ್ರತಿರೋಧ ಒಡ್ಡಿದವರನ್ನು ಸ್ಮರಿಸುವುದು ಮಾತ್ರವಲ್ಲದೇ, ಭವಿಷ್ಯದ ಪೀಳಿಗೆಗೆ ಸಂವಿಧಾನದ ಮೌಲ್ಯಗಳು, ನಾಗರಿಕ ಹಕ್ಕುಗಳ ರಕ್ಷಣೆ ಕುರಿತಂತೆ ಜಾಗೃತವಾಗಿರುವ ಬಗ್ಗೆ ಕಾರ್ಯಕ್ರಮ ಸಂದೇಶ ನೀಡಲಿದೆ ಎಂದು ಸ್ಪೀಕರ್‌ ವಿಜೇಂದ್ರ ಗುಪ್ತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.