ADVERTISEMENT

ದೆಹಲಿ ನಿರಂಕುಶಾಧಿಕಾರಕ್ಕೆ ಯಡಿಯೂರಪ್ಪ ತಲೆದಂಡ: ಕಾಂಗ್ರೆಸ್

ಪಿಟಿಐ
Published 26 ಜುಲೈ 2021, 11:08 IST
Last Updated 26 ಜುಲೈ 2021, 11:08 IST
ರಂದೀಪ್ ಸುರ್ಜೆವಾಲಾ
ರಂದೀಪ್ ಸುರ್ಜೆವಾಲಾ   

ನವದೆಹಲಿ: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಕುರಿತು ಕಾಂಗ್ರೆಸ್ಪ್ರತಿಕ್ರಿಯೆ ನೀಡಿದೆ.

ಈ ಕುರಿತು ನವದೆಹಲಿಯಲ್ಲಿ ಸೋಮವಾರ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾಅವರು, ‘ದೆಹಲಿ ನಾಯಕತ್ವದ ನಿರಂಕುಶಾಧಿಕಾರಕ್ಕೆ ಕರ್ನಾಟಕದಲ್ಲಿ ಯಡಿಯೂರಪ್ಪನವರ ತಲೆದಂಡವಾಗಿದೆ. ಇದು ಪ್ರಧಾನಿ ಮೋದಿ ಅವರು ಬಲವಂತವಾಗಿ ಬಿಜೆಪಿ ಹಿರಿಯ ನಾಯಕರಿಗೆ ನಿವೃತ್ತಿ ನೀಡುತ್ತಿರುವುದಕ್ಕೆ ಹೊಸ ಸೇರ್ಪಡೆ‘ ಎಂದಿದ್ದಾರೆ.

‘ಅಲ್ಲದೇ ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು? ಎಂಬುದನ್ನು ಅಲ್ಲಿನ ಬಿಜೆಪಿ ಶಾಸಕಾಂಗ ಪಕ್ಷ ನಿರ್ಧರಿಸುವುದಿಲ್ಲ. ಬದಲಿಗೆ ದೆಹಲಿ ನಿರಂಕುಶಾಧಿಕಾರಿಗಳೇ ನಿರ್ಧರಿಸುತ್ತಾರೆ‘ ಎಂದು ಲೇವಡಿ ಮಾಡಿದ್ಧಾರೆ.

ADVERTISEMENT

‘ಯಾವಾಗ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆಯೋ ಅಂದಿನಿಂದಲೂ ಅದು ಅತ್ಯಂತ ಭ್ರಷ್ಟ ಸರ್ಕಾರವಾಗಿದೆ‘ ಎಂದು ಸುರ್ಜೆವಾಲಾಟೀಕಿಸಿದ್ದಾರೆ.

‘ಮೋದಿ ಅವರು ಪಕ್ಷಕ್ಕಾಗಿ ದುಡಿದ ತಮ್ಮ ಹಿರಿಯ ನಾಯಕರನ್ನು ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವುದಕ್ಕೆ ಇದು ಮತ್ತೊಂದು ನಿದರ್ಶನ. ಯಡಿಯೂರಪ್ಪ ಅವರು ಮೋದಿ ರಚಿಸಿದ ರಿಟೈರಮೆಂಟ್ ಕ್ಲಬ್‌ಗೆ ಸೇರಿದಂತಾಗಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.