ADVERTISEMENT

ಕೊವ್ಯಾಕ್ಸಿನ್ ಪ್ರಯೋಗ: ಡಾ.ಡ್ಯಾಂಗ್ಸ್ ಲ್ಯಾಬ್ ಆಯ್ಕೆ

ಪಿಟಿಐ
Published 23 ಜುಲೈ 2020, 12:37 IST
Last Updated 23 ಜುಲೈ 2020, 12:37 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ:ದೆಹಲಿ ಮೂಲದಡಾ. ಡ್ಯಾಂಗ್ಸ್‌ ಖಾಸಗಿ ಪ್ರಯೋಗಾಲಯವು ಕೊರೊನಾ ಸಂಭಾವ್ಯ ಲಸಿಕೆ(ಕೋವಾಕ್ಸಿನ್) ವೈದ್ಯಕೀಯ ಬಳಕೆಯ (ಕ್ಲಿನಿಕಲ್ ‌ಟ್ರಯಲ್‌) ಕೇಂದ್ರ ಪ್ರಯೋಗಾಲಯವಾಗಿ ಆಯ್ಕೆಯಾಗಿದೆ ಎಂದು ಹೇಳಿಕೊಂಡಿದೆ.

ಕ್ಲಿನಿಕಲ್ ‌ಟ್ರಯಲ್ ನಡೆಸಲು ಭಾರತ್‌ ಬಯೋಟೆಕ್‌ ಜೊತೆ ಪಾಲುದಾರಿಕೆ ಹೊಂದಲಾಗಿದೆ ಎಂದೂ ತಿಳಿಸಿದೆ.

ಪುಣೆಯ ರಾಷ್ಟ್ರೀಯ ವೈರಾಣು ಅಧ್ಯಯನ ಸಂಸ್ಥೆ (ಎನ್‌ಐವಿ) ಮತ್ತು ಐಸಿಎಂಆರ್ ಸಹಯೋಗದಲ್ಲಿ ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಸಂಸ್ಥೆಯು ಈ ದೇಶದ ಮೊದಲ ಕೋವಿಡ್‌–19‌ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

ADVERTISEMENT

‘ಭಾರತದಲ್ಲಿ ನಡೆದ ಬಹುಕೇಂದ್ರಿತ ಕ್ಲಿನಿಕಲ್‌ ಟ್ರಯಲ್‌ ಇದು’ ಎಂದು ಅದು ಹೇಳಿದೆ.

‘ಡಾ. ಡ್ಯಾಂಗ್ಸ್‌ ಲ್ಯಾಬ್‌ ಸದ್ಯ, ಈ ಕ್ಲಿನಿಕಲ್‌ ಟ್ರಯಲ್‌ ಅಥವಾ ಪರೀಕ್ಷೆಯ ವಿವಿಧ ಹಂತಗಳಲ್ಲಿ ಬಳಸಲಾದ ಎಲ್ಲ ಮಾದರಿಗಳನ್ನು ಪರೀಕ್ಷಿಸುತ್ತಿದೆ. ಪುಣೆಯ ರಾಷ್ಟ್ರೀಯ ವೈರಾಣು ಅಧ್ಯಯನ ಸಂಸ್ಥೆಯಲ್ಲಿ (ಎನ್‌ಐವಿ) ಈ ಎಲ್ಲ ಅಧ್ಯಯನ ಪರೀಕ್ಷೆಗಳು ನಡೆಯಲಿವೆ’ ಎಂದು ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.