
ಶ್ರೀನಗರ: ರಾಜಧಾನಿ ದೆಹಲಿಯ ಕೆಂಪು ಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟ ಪ್ರಕರಣದ ಆರೋಪಿ, ಕಾರು ಚಲಾಯಿಸುತ್ತಿದ್ದ ಡಾ. ಉಮರ್ ನಬಿ ಅವರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿದ್ದ ಮನೆಯನ್ನು ಭದ್ರತಾ ಪಡೆಗಳು ಉರುಳಿಸಿವೆ.
ಸೋಮವಾರ ರಾತ್ರಿ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟದಲ್ಲಿ 13 ಮಂದಿ ಋತಪಟ್ಟಿ ದ್ದು, ಹಲವರು ಗಾಯಗೊಂಡಿದ್ದರು.
ಸ್ಫೋಟಕಗಳಿಂದ ತುಂಬಿದ್ದ ಹುಂಡೈ ಐ20 ಕಾರನ್ನು ಉಮರ್ ಚಲಾಯಿಸುತ್ತಿದ್ದರು. ಸ್ಫೋಟದ ಸ್ಥಳದಿಂದ ಸಂಗ್ರಹಿಸಲಾದ ಡಿಎನ್ಎ ಮಾದರಿಗಳು ಡಾ. ಉಮರ್ ಅವರ ತಾಯಿಯ ಡಿಎನ್ಎ ಮಾದರಿಗಳೊಂದಿಗೆ ಹೊಂದಿಕೆಯಾದ ನಂತರ ಅವರ ಗುರುತು ದೃಢಪಟ್ಟಿತ್ತು.
ತಾವು ವಾಸವಿದ್ದ ಪ್ರದೇಶದಲ್ಲಿ ಶೈಕ್ಷಣಿಕ ಸಾಧನೆ ಮೂಲಕ ಹೆಸರುವಾಸಿಯಾಗಿದ್ದ ಉಮರ್, ಕಳೆದ ಎರಡು ವರ್ಷಗಳಿಂದ ತೀವ್ರಗಾಮಿಯಾಗಿ ಮಾರ್ಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ತೀವ್ರಗಾಮಿ ಸಂದೇಶ ಕಳುಹಿಸುವ ಗ್ರೂಪ್‌ಗಳನ್ನು ಸೇರಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.