ADVERTISEMENT

ಸಂಸತ್‌ ಅಧಿವೇಶನದಲ್ಲಿ ಭಾಗವಹಿಸಲು ಜೈಲಿನಲ್ಲಿರುವ ಸಂಸದ ರಶೀದ್‌ಗೆ ಅವಕಾಶ

ಪಿಟಿಐ
Published 27 ನವೆಂಬರ್ 2025, 13:01 IST
Last Updated 27 ನವೆಂಬರ್ 2025, 13:01 IST
<div class="paragraphs"><p>ಎಂಜಿನಿಯರ್‌ ರಶೀದ್‌</p></div>

ಎಂಜಿನಿಯರ್‌ ರಶೀದ್‌

   

ಪಿಟಿಐ ಚಿತ್ರ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಜಮ್ಮು ಮತ್ತು ಕಾಶ್ಮೀರದ ಸಂಸದ, ಸದ್ಯ ಜೈಲಿನಲ್ಲಿರುವ ಎಂಜಿನಿಯರ್‌ ರಶೀದ್‌ ಅವರಿಗೆ ದೆಹಲಿ ನ್ಯಾಯಾಲಯ ‘ಕಸ್ಟಡಿ ಪೆರೋಲ್‌’ ಮೂಲಕ ಅನುಮತಿ ನೀಡಿದೆ ಎಂದು ವರದಿಯಾಗಿದೆ.

ADVERTISEMENT

ಡಿಸೆಂಬರ್ 1ರಿಂದ 19ರವರೆಗೆ ನಡೆಯಲಿರುವ ಸಂಸತ್‌ ಕಲಾಪದಲ್ಲಿ ಭಾಗವಹಿಸಲು ಮಧ್ಯಂತರ ಜಾಮೀನು ಅಥವಾ ಕಸ್ಟಡಿ ಪೆರೋಲ್‌ ನೀಡುವಂತೆ ಬಾರಾಮುಲ್ಲಾ ಕ್ಷೇತ್ರದ ಸಂಸದರಾದ ರಶೀದ್‌, ಕೋರ್ಟ್‌ಗೆ ಮನವಿ ಮಾಡಿದ್ದರು.

ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿದ ಆರೋಪದಡಿ ಶೇಖ್‌ ಅಬ್ದುಲ್‌ ರಶೀದ್ ಅವರನ್ನು ಎನ್‌ಐಎ 2017ರಲ್ಲಿ ಬಂಧಿಸಿತ್ತು. ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ. 2019ರಿಂದ ಅವರು ತಿಹಾರ್‌ ಜೈಲಿನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.