ADVERTISEMENT

ಅಂದ್ರಾಬಿ, ಇಬ್ಬರು ಸಹಚರರ ವಿರುದ್ಧ ಭಯೋತ್ಪಾದನೆ ಆರೋಪ

ಪಿಟಿಐ
Published 23 ಫೆಬ್ರುವರಿ 2021, 9:56 IST
Last Updated 23 ಫೆಬ್ರುವರಿ 2021, 9:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕಿ ಆಸಿಯಾ ಅಂದ್ರಾಬಿ ಹಾಗೂ ಆಕೆಯ ಇಬ್ಬರು ಸಹಚರರ ವಿರುದ್ಧದೆಹಲಿ ಕೋರ್ಟ್‌ ಭಯೋತ್ಪಾದನೆ, ದೇಶದ್ರೋಹ ಹಾಗೂ ಇತರ ಆರೋಪಗಳನ್ನು ಹೊರಿಸಿದೆ.

ಅಂದ್ರಾಬಿ ಹಾಗೂ ಸಹಚರರಾದ ಸೋಫಿ ಫೆಹಮಿದಾ, ನಹಿದಾ ನಸ್ರೀನ್‌ ಅವರ ವಿರುದ್ಧ ಐಪಿಸಿ ಹಾಗೂ ಯುಎಪಿಎ ಅಡಿ ಆರೋಪ ಹೊರಿಸಲಾಗಿದೆ. ಪಾಕಿಸ್ತಾನದ ನೆರವಿನೊಂದಿಗೆ ದೇಶದ ವಿರುದ್ಧ ಯುದ್ಧ ಹೂಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಮೂವರನ್ನು 2018ರ ಏಪ್ರಿಲ್‌ನಲ್ಲಿ ಬಂಧಿಸಲಾಗಿದೆ.

ವಿಶೇಷ ನ್ಯಾಯಾಧೀಶರಾದ ಪರ್ವೀನ್‌ ಸಿಂಗ್‌ ಅವರು ವಿಚಾರಣೆ ಆರಂಭಿಸಿದ್ದಾರೆ.

ADVERTISEMENT

ದುಖ್ತರನ್‌–ಎ–ಮಿಲ್ಲತ್‌ (ರಾಷ್ಟ್ರದ ಪುತ್ರಿಯರು) ಎಂಬ ಸಂಘಟನೆಯ ಮುಖ್ಯಸ್ಥೆಯಾಗಿರುವ ಅಂದ್ರಾಬಿ, ಆಕೆಯ ಸಹಚರರು ದೇಶವನ್ನು ಅಸ್ಥಿರಗೊಳಿಸಿ, ಭಾರತದ ಸಾರ್ವಭೌಮತೆಗೆ ಧಕ್ಕೆ ತರಲು ಪಿತೂರಿ ನಡೆಸಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿರುವ ಎಫ್ಐಆರ್‌ನಲ್ಲಿ ಆರೋಪಿಸಲಾಗಿದೆ.

ಈ ಉಗ್ರ ಸಂಘಟನೆಯನ್ನು ಯುಎಪಿಎ ಅಡಿ ನಿಷೇಧಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.