ADVERTISEMENT

ಶೇ 61 ರಷ್ಟು ಮತದಾನ 11ರಂದು ಫಲಿತಾಂಶ

ಪಿಟಿಐ
Published 8 ಫೆಬ್ರುವರಿ 2020, 17:45 IST
Last Updated 8 ಫೆಬ್ರುವರಿ 2020, 17:45 IST
ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿರುವ ಜನ
ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿರುವ ಜನ   

ನವದೆಹಲಿ: ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸಂಜೆವರೆಗೆ ಶೇ 61 ರಷ್ಟು ಮತದಾನ ಆಗಿದೆ. ಕೆಲವು ಮತಗಟ್ಟೆಗಳಲ್ಲಿ ಮತದಾನ 6ರ ಬಳಿಕವೂ ನಡೆಯಿತು. ಮತದಾನದ ಪ್ರಮಾಣ ಹೆಚ್ಚಾಗಬಹುದು ಎಂದು ಮುಖ್ಯ ಚುನಾವಣಾಧಿಕಾರಿ ರಣಬೀರ್‌ ಸಿಂಗ್‌ ಹೇಳಿದರು.

ಸಂಜೆ 6ಕ್ಕೆ ಮತದಾನ ಪ್ರಕ್ರಿಯೆ ಅಧಿಕೃತವಾಗಿ ಮುಗಿಯಬೇಕು. ಆದರೆ, ಕೆಲವು ಮತಗಟ್ಟೆಗಳಲ್ಲಿ ಜನರು ಇನ್ನೂ ಸಾಲಿನಲ್ಲಿ ನಿಂತಿರುವುದರಿಂದ ಅವರಿಗೆ ಮತ ಹಾಕಲು ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಫೆ. 11ರಂದು ಮತ ಎಣಿಕೆ ನಡೆಯಲಿದೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT