ADVERTISEMENT

ದೆಹಲಿ ಚುನಾವಣೆ: ಶೇ.58 ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 12:58 IST
Last Updated 8 ಫೆಬ್ರುವರಿ 2020, 12:58 IST
ದೆಹಲಿ ಚುನಾವಣೆ ಮುಗಿದ ಮತದಾನ
ದೆಹಲಿ ಚುನಾವಣೆ ಮುಗಿದ ಮತದಾನ   

ನವದೆಹಲಿ (ಪಿಟಿಐ): ಆಮ್‌ ಆದ್ಮಿ ಪಾರ್ಟಿ (ಎಎಪಿ) ಹಾಗೂ ಬಿಜೆಪಿ ನಡುವಿನ ನೇರ ಹಣಾಹಣಿಯಿಂದಾಗಿ ದೇಶದ ಗಮನ ಸೆಳೆದಿದ್ದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶನಿವಾರ58ರಷ್ಟು ಮತದಾನವಾಗಿದೆ.

ಕಳೆದ ಬಾರಿಗೆ ಹೋಲಿಸಿದರೆಮತದಾನ ಕಡಿಮೆ ಪ್ರಮಾಣದಲ್ಲಿ ನಡೆದಿದೆ. ಕಳೆದ ಬಾರಿ 67.5 ರಷ್ಟು ಮತದಾನವಾಗಿತ್ತು. ಶನಿವಾರಬೆಳಿಗ್ಗೆಯಿಂದ ಮತದಾರರಿಂದನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ, ಶಾಂತಿಯುತವಾಗಿ ಮತದಾನ ಮುಗಿದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಬೆಳಿಗ್ಗೆಯಿಂದಲೂ ರಾಷ್ಟ್ರ ರಾಜಧಾನಿಯ ಮತದಾರರು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾವಣೆ ಮಾಡಲು ಉತ್ಸಾಹ ತೋರಲಿಲ್ಲ. ಮಧ್ಯಾಹ್ನ 3 ಗಂಟೆಗೆ ವರೆಗೆ ಕೇವಲ ಶೇ 41.5 ರಷ್ಟು ಮತ ಚಲಾವಣೆಯಾಗಿತ್ತು. 2015ರಲ್ಲಿ ಇದೇ ವೇಳೆಗೆ ಶೇ 51.2ರಷ್ಟು ಮತ ಚಲಾವಣೆಯಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.