ADVERTISEMENT

ನಿರ್ಭಯಾ ಪ್ರಕರಣದ ಅಪರಾಧಿಗಳ ರಕ್ಷಣೆಗೆ ಎಎಪಿ ಯತ್ನ: ಬಿಜೆಪಿ ಆರೋಪ

ಪಿಟಿಐ
Published 19 ಜನವರಿ 2020, 12:56 IST
Last Updated 19 ಜನವರಿ 2020, 12:56 IST
ಮನೋಜ್ ತಿವಾರಿ
ಮನೋಜ್ ತಿವಾರಿ   

ನವದೆಹಲಿ: ‘ನಿರ್ಭಯಾ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವವರನ್ನು ರಕ್ಷಿಸಲು ದೆಹಲಿಯ ಎಎಪಿ ಸರ್ಕಾರ ಪ್ರಯತ್ನಿಸುತ್ತಿದ್ದು, ನ್ಯಾಯದಾನ ಪ್ರಕ್ರಿಯೆಗೆ ಅಡ್ಡಿ ಮಾಡುತ್ತಿದೆ’ ಎಂದು ಬಿಜೆಪಿ ಭಾನುವಾರ ಆರೋಪಿಸಿದೆ.

‘ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿರುವುದನ್ನು ಎಎಪಿ ಸರ್ಕಾರ ಉದ್ದೇಶಪೂರ್ವಕಾಗಿ ಎರಡು ವರ್ಷ ಅವರಿಂದ ಮುಚ್ಚಿಟ್ಟಿತ್ತು. 2017ರಲ್ಲಿ ನೀಡಬೇಕಾಗಿದ್ದ ಮಾಹಿತಿಯನ್ನು 2019ರಲ್ಲಿ ನೀಡಲಾಗಿದೆ’ ಎಂದು ಬಿಜೆಪಿಯ ದೆಹಲಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಅಪರಾಧಿಗಳನ್ನು ಕ್ಷಮಿಸಬೇಕೆಂದು ನಿರ್ಭಯಾ ತಾಯಿಗೆ ವಕೀಲೆ ಇಂದಿರಾ ಜೈಸಿಂಗ್ ಅವರು ಮನವಿ ಮಾಡಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಇಂದಿರಾ ಅವರು ಎಎಪಿ ಜತೆ ಗುರುತಿಸಿಕೊಂಡಿರುವುದು ಎಲ್ಲರಿಗೂ ತಿಳಿದಿದೆ. ಪೊಲೀಸರು ನಮ್ಮ ವ್ಯಾಪ್ತಿಯಲ್ಲಿ ಇಲ್ಲ ಎಂದು ಹೇಳುವ ಮೂಲಕ ಕೇಜ್ರಿವಾಲ್ ಸರ್ಕಾರ ತಪ್ಪಿಸಿಕೊಳ್ಳುವಂತಿಲ್ಲ. ತಿಹಾರ ಜೈಲು ದೆಹಲಿ ಸರ್ಕಾರದ ವ್ಯಾಪ್ತಿಗೆ ಬರುತ್ತದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.